ಇದು ನಮ್ಮ ಬಳಗ ಸ್ನೇಹ ಬಳಗ
ಮಾತುಕತೆ ಅವಿರತ - ನಿರಂತರ...
ಇಲ್ಲ ಎಲ್ಲರದ್ದು ಒಂದೊಂದು ವೇಷ
ಒಪ್ಪಿಗೆ ಇಲ್ಲದೇ ಹೊರಗಿನವರಿಗಿಲ್ಲ ಪ್ರವೇಶ
ಊಟ ತಿಂಡಿಗಳೆಲ್ಲದರಲ್ಲೂ...
ಪಾಲು ಕೇಳುವಷ್ಟು ಸನಿಹ ನಮ್ಮೆಲ್ಲರ ಸ್ನೇಹ
ಹೀಗಿರಲು ಅಕಸ್ಮಾತ್ ಇನ್ನಾರೋ ಪರ ವ್ಯಕ್ತಿಯ
ಪ್ರವೇಶಕ್ಕೆ ರತ್ನಗಂಬಳಿಯ ಸ್ವಾಗತ !
ಪರ ವ್ಯಕ್ತಿ ಪರಮಾಪ್ತನಾಗಿ ಬೆರೆತಾಗ ಬಳಗದಲ್ಲೊಂದು ಪುಳಕ
ಮಾತುಕತೆಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ
ಅಲ್ಲಿಯವರೆಗೆ ಎಲ್ಲವೂ ಸುಸೂತ್ರ - ಸರಾಗ
ಹಠಾತ್ ಕಹಾನಿಯಲ್ಲೊಂದು ಟ್ವಿಸ್ಟ್ !
ಅಕಸ್ಮಾತ್ ಪರ ವ್ಯಕ್ತಿಯ ನಿರ್ಗಮನ
ಎನ್ನ ಬಿಟ್ಟು ಬಳಗದ ಎಲ್ಲರೂ ಅವರೊಡನೆ ಸಹಗಮನ !
ಮಾತುಗಳ ಮಂಟಪದಲ್ಲಿ ಕಂಗೊಳಿಸುತ್ತಿದ್ದ ಬಳಗದಲಿ
ಕ್ಷಣಮಾತ್ರದಲಿ ಕರಾಳ ಮೌನ.
ಈಗ ಇಲ್ಲಿ ನೆನಪುಗಳದ್ದಷ್ಟೇ ಪ್ರತಿಧ್ವನಿ
ಯಾಕೆಂದು ಪ್ರಶ್ನಿಸಿದರೆ ಉತ್ತರಿಸುವವರಿಲ್ಲ
ನನ್ನತ್ತ ತಿರುಗಿ ನೋಡುವವರಿಲ್ಲ, ಎಲ್ಲೆಲ್ಲೂ ಭಣ ಭಣ...
ನಡುವೆ ನಾನೊಬ್ಬನೇ ಜೀವಂತ ಹೆಣ.
ಮಾತುಕತೆ ಅವಿರತ - ನಿರಂತರ...
ಇಲ್ಲ ಎಲ್ಲರದ್ದು ಒಂದೊಂದು ವೇಷ
ಒಪ್ಪಿಗೆ ಇಲ್ಲದೇ ಹೊರಗಿನವರಿಗಿಲ್ಲ ಪ್ರವೇಶ
ಊಟ ತಿಂಡಿಗಳೆಲ್ಲದರಲ್ಲೂ...
ಪಾಲು ಕೇಳುವಷ್ಟು ಸನಿಹ ನಮ್ಮೆಲ್ಲರ ಸ್ನೇಹ
ಹೀಗಿರಲು ಅಕಸ್ಮಾತ್ ಇನ್ನಾರೋ ಪರ ವ್ಯಕ್ತಿಯ
ಪ್ರವೇಶಕ್ಕೆ ರತ್ನಗಂಬಳಿಯ ಸ್ವಾಗತ !
ಪರ ವ್ಯಕ್ತಿ ಪರಮಾಪ್ತನಾಗಿ ಬೆರೆತಾಗ ಬಳಗದಲ್ಲೊಂದು ಪುಳಕ
ಮಾತುಕತೆಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ
ಅಲ್ಲಿಯವರೆಗೆ ಎಲ್ಲವೂ ಸುಸೂತ್ರ - ಸರಾಗ
ಹಠಾತ್ ಕಹಾನಿಯಲ್ಲೊಂದು ಟ್ವಿಸ್ಟ್ !
ಅಕಸ್ಮಾತ್ ಪರ ವ್ಯಕ್ತಿಯ ನಿರ್ಗಮನ
ಎನ್ನ ಬಿಟ್ಟು ಬಳಗದ ಎಲ್ಲರೂ ಅವರೊಡನೆ ಸಹಗಮನ !
ಮಾತುಗಳ ಮಂಟಪದಲ್ಲಿ ಕಂಗೊಳಿಸುತ್ತಿದ್ದ ಬಳಗದಲಿ
ಕ್ಷಣಮಾತ್ರದಲಿ ಕರಾಳ ಮೌನ.
ಈಗ ಇಲ್ಲಿ ನೆನಪುಗಳದ್ದಷ್ಟೇ ಪ್ರತಿಧ್ವನಿ
ಯಾಕೆಂದು ಪ್ರಶ್ನಿಸಿದರೆ ಉತ್ತರಿಸುವವರಿಲ್ಲ
ನನ್ನತ್ತ ತಿರುಗಿ ನೋಡುವವರಿಲ್ಲ, ಎಲ್ಲೆಲ್ಲೂ ಭಣ ಭಣ...
ನಡುವೆ ನಾನೊಬ್ಬನೇ ಜೀವಂತ ಹೆಣ.
ಕೆ. ನಾ. ಗೋರೆ

Good one..
ಪ್ರತ್ಯುತ್ತರಅಳಿಸಿಧನ್ಯವಾದಗಳು...ಸಲಹೆಗಳಿಗೆ ಮುಕ್ತ ಸ್ವಾಗತ
ಪ್ರತ್ಯುತ್ತರಅಳಿಸಿ