ಬುಧವಾರ, ಫೆಬ್ರವರಿ 15, 2012


ಸ್ವತಂತ್ರ ಹಕ್ಕಿ


ನಮ್ಮ ಮನಸ್ಸಿಗೆ, ಜೀವನಕ್ಕೆ, ಬದುಕಿಗೆ ಬಹಳ ಹತ್ತಿರವಾಗಿ ತೊರೆಯಲಸಾಧ್ಯವಾದಷ್ಟು ಇಷ್ಟವಾದವರು ನಮ್ಮೊಡನೆ ಮಾತನಾಡುವ ರೀತಿ, ನಮ್ಮ ಬಗೆಗೆ ಅವರಲ್ಲಿರುವ ಕಾಳಜಿ ಇವೆಲ್ಲವೂ ಇನ್ನಷ್ಟು ಮತ್ತಷ್ಟು ಹೆಚ್ಚಾಗಬೇಕು ಅಥವಾ ಇದರಲ್ಲಿ ಯಾವುದೇ ಕೊತರೆಯಾಗದೆ ಸದಾ ಒಂದೇ ರೀತಿಯಾಗಿ ಇರಬೇಕೆಂದು ಎಲ್ಲರ ಮನಸ್ಸು ಬಯಸುತ್ತದೆ. ಆದರೆ ಎಂದಾದರೂ ಇವೆಲ್ಲದರಲ್ಲಿ ಕೊಂಚ ಕೊರತೆ ಇದೆ ಎಂದೆನಿಸಿದರೂ ಮನಸ್ಸು ಸಹಜವಾಗಿಯೇ ತಲ್ಲಣಗೊಳ್ಳುತ್ತದೆ. ಸಂಬಂಧಗಳು ದೂರವಾಗುವವೋ  ನಾವು ಅವರಿಗೆ ಬೆಡವೇನೋ ಎಂಬ ಚಿಂತೆಯಾಗಿ ಈ ಬಗ್ಗೆ ಅವರಲ್ಲಿ ಅರುಹಿದಾಗ ಅವರಿಂದ ಸೂಕ್ತ ಉತ್ತರ ದೊರೆಯದಿದ್ದರೆ ಬದುಕಿನಲ್ಲಿ ಆಶಾಭಾವವೇ ಕಳಕೊಂಡಂತಾಗುತ್ತದೆ. ನಮ್ಮ ಇಗೋ ವನ್ನು ಬಿಟ್ಟು ಮನಸ್ಸಿನಲ್ಲಿನ ಗೊಂದಲಗಳನ್ನು ಅಳುಕಿಲ್ಲದೆ ಹೇಳಿ ಮನಸ್ಸನ್ನು ಹಗಿರಗಿಸಬೇಕು, ನಿನ್ನ ಕಷ್ಟದಲ್ಲಿ ನನ್ನನ್ನೂ ಭಾಗಿಯನ್ನಾಗಿ ಮಾಡಬೇಕು  ಹಾಗೂ  ನೀನು ಹಿಂದಿನಂತೆಯೇ ಪ್ರೀತಿ ವಿಶ್ವಾಸವನ್ನು ತೋರಬೇಕು, ಎಂದು ಪದೇ ಪದೇ ಒತ್ತಿ ಹೇಳಿದ ಮೇಲೂ ಆ ಬಗ್ಗೆ ಗಮನವೇ ನೀಡದೆ ನಿರ್ಲಕ್ಷಿಸಿದಾಗ ಯಾರನ್ನೋ ಶಾಶ್ವತವಾಗಿ ಕಳಕೊಂಡ ಮನಸ್ಸಿಗೆ ಅತೀವ ಬೆಸರವಾಗಿ ಮನಸ್ಸು ನಮ್ಮ ಹತೋಟಿಗೇ ಬರದೆ ಸತಾಯಿಸುತ್ತಿರುತ್ತದೆ. ಹತ್ತೆ ಅದನ್ನು ಹತೋಟಿಗೆ ತರಬೇಕಾದಲ್ಲಿ  ನಮ್ಮ ನೆಚ್ಚಿನ ವ್ಯಕ್ತಿ  ಹಿಂದಿನ ರೀತಿಯಲ್ಲೇ ಆತ್ಮೀಯವಾಗಿ ವತರ್ಿಸತೊಡಗಿದಾಗ ಮಾತ್ರ ಅದು ಸಾಧ್ಯವಾಗಿತ್ತದೆ. ಆದರೆ ನನ್ನ ವರ್ತನೆಯಲ್ಲಿನ ಬದಲಾವಣೆಯಿಂದ ನಮಗೆ ಹತ್ತಿರವಾದವರಿಗೆ ಬೇಸರವಾಗುತ್ತದೆ. ಹನಸ್ಸು ಹತೋತಿಯಲ್ಲಿಲ್ಲ ಅದನ್ನು ಸರಿಪಡಿಸುವುದು ನನ್ನ ಜವಾಬ್ದಾರಿ ಎಂದು ಅವರಿಗೆ ಅರಿವಾದಲ್ಲಿ ಮಾತ್ರ ತಮ್ಮವರಿಗಾಗಿ ಹಿಂದಿನ ಆತ್ಮೀಯತೆಯನ್ನು ತೋರುವುದಕ್ಕೆ ಸಾಧ್ಯ. ಅವರ ಈ ಬದಲಾವಣೆಗೆ ಅನೇಕ ಕಾರಣಗಳಿರಬಹುದು, ನಮ್ಮ ಯಾವುದೋ ಒಂದು ವರ್ತನೆಯೂ ಕಾರಣವಾಗಿರಬಹುದು. ಹಾಗಾಗಿ ಈ ಅರಿವು ಮೂಡಲು ಅವರೀಗೆ ಸಮಯಾವಕಾಶವನ್ನು ನೀಡಬೇಕು ಹಾಗೂ ನಾವು ವಿಚಲಿತರಾಗಿದ್ದರೂ ಅದನ್ನು ತೋರದೆ ಅವರನ್ನು ಹಿಂದಿನಂತೆ ಮಾಡಲು ಪ್ರಯತ್ನಿಸಬೇಕು. ಇದೆಲ್ಲದರ ಹೊರತಾಗಿಯೂ ಸಂಭಂದಗಳು ಸರಿಯಾಗದಿದ್ದಲ್ಲಿ, ಮನಸ್ಸುಗಳ ನಡುವೆ ತೆಗೆಯಲಾಗದ ಕೆಸರು ತುಂಬಿಕೊಳ್ಳುತ್ತದೆಂದಾದಲ್ಲಿ ಅಂತಹವರಿಗೆ ಮತ್ತೆ ಮತ್ತೆ ಹೇಳಿ ಸಮಸ್ಯೆಯಾಗುದಕ್ಕಿಂತ ನಾವು ಒಂದಷ್ಟು ದೂರದಲ್ಲಿದ್ದು ಅಲ್ಲಿಂದಲೇ ಆತ್ಮೀಯತೆ ಮತ್ತು ಪ್ರೀತಿಯಿಂದ  ಅವರನ್ನು ಗಮನಿಸುತ್ತಾ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದೇ ಸೂಕ್ತ. ಎಂದಾದರೊಂದು ದಿನ ಅವರ ಜೀವನದಲ್ಲಿ ನಮ್ಮ ಇರುವಿಕೆಯ ಕೊರತೆಯ ಅರಿವಾಗಿ ಮತ್ತೆ ನಮ್ಮ ಹತ್ತಿರವಾಗಬೇಕೆಂದೆನಿಸಿದಾಗ ಅವರಾಗಿಯೇ ಬರುತ್ತಾರೆಂಬ ಆಶಾಭಾವ ಹೊಂದಿರಬೇಕಷ್ಟೇ. ಹೆಚ್ಚಿನವರಿಗೆ ಈ ಅರಿವು ಮೂಡುವುದೇ ಇಲ್ಲ, ಮೂಡಿದರೂ ಮತ್ತೆ ನಮ್ಮ ಬಳಿ ಬರಲು ಇಗೋ ಅಥವಾ ಅಪರಾಧೀ ಮನೂಭಾವ ಬಿಡುವುದಿಲ್ಲ. ಹಾಗೇನಾದರೂ ಅವೆಲ್ಲವನ್ನೂ ಮೀರಿ ಬಂದಲ್ಲಿ  ಹಿಂದೊಮ್ಮೆ ಅವರಿಗೆ ನಾನು ಬೇಡವಾಗಿದ್ದೆ, ಈಗ ಅವರ ಅಗತ್ಯ ನನಗೂ ಇಲ್ಲ ಎಂಬಿತ್ಯಾದಿ ಕೋಪವನ್ನು ನಾವು ತೋರದೆ ಸದಾ ಅವರನ್ನು ಸ್ವಾಗತಿಸುವ ಮನಸ್ಸು ಮಾಡಬೇಕಷ್ಟೆ. ಬಾರದಿದ್ದಲ್ಲಿ ಅವರಿಂದ ಸದಾ ದೂರವಿದ್ದು ಅವರ ಹಿತವನ್ನು ಬಯಸುವುದೇ ಸೂಕ್ತ ಎಂಬ ಭಾವನೆ ನನ್ನದು. ನಿಮ್ಮದೇನಿದ್ದರೂ ಈ ಬರಹವನ್ನು ಓದಿದ ಮೇಲೆ ನಿಮ್ಮ ನಿಲುವನ್ನು ಮರುರೂಪಿಸಬೇಕೆಂದೆನಿಸಿದರೆ ಅಥವಾ ನಿಮ್ಮ ನಿಲುವೇ ಸರಿಯಾದುದೆಂಬುದನ್ನು ಸಮಥರ್ಿಸಲು ಈ ಬರವಣಿಗೆ ಸಹಕಾರಿಯಾದರೆ ನಾನು ಧನ್ಯ.

                                                ಇಂತಿ,
                                                 ಕೆ.ನಾ.ಗೋರೆ 
                                                    

Mandase

ಬಹುಕಾಲದ ಹಿಂದೆ ಬ್ಲಾಗ್ ಪ್ರಾರಂಭಿಸಿದ್ದೇನೆ ಆದ್ರೆ ನನ್ನ ಬರವಣಿಗೆಗಳನ್ನು ಪ್ರಕಟಿಸಲು ಸಾಧ್ಯವಾಗಿಲ್ಲ. ಇನ್ನಾದ್ರು ಪ್ರಕಟಿಸಬೇಕೆಂಬ ಹಂಬಲ ಇದೆ