ಬುಧವಾರ, ಡಿಸೆಂಬರ್ 4, 2013

ದ್ವಂದ್ವ... ಮತ್ತದೇ ದ್ವಂದ್ವ ! ಭಾಗ-2

(ಗೂಗಲ್  ಚಿತ್ರ )
ಈಚಿನ ದಿನಗಳಲ್ಲಿ ಕೃಷಿ, ಹೈನುಗಾರಿಕೆ ಚಟುವಟಿಕೆಗಳ ಜಂಜಾಟದಲ್ಲಿ ನನ್ನ ಹವ್ಯಾಸಗಳೆಲ್ಲವೂ ಧೂಳು ಹಿಡಿಯುವ ಹಂತ ತಲುಪಿದ್ದವು. ಕೃಷಿ ಕಾರ್ಯಗಳೇ ಹಾಗೆ ಮುಕ್ತಾಯವಿಲ್ಲದ ಮೆಗಾ ಸೀರಿಯಲ್ಗಳಂತೆ. ಒಂದು ಸಮಸ್ಯೆಯನ್ನು ನಿವಾರಿಸಿ ನಿಟ್ಟುಸಿರು ಬಿಡುವಾಗ ಇನ್ನೊಂದು ಕೂಗಿ ಕರೆಯುತ್ತದೆ. ಒಂದರ್ಥದಲ್ಲಿ  ಕೃಷಿಕರ ಸಮಸ್ಯೆಗಳೆಂದರೆ ಸಮುದ್ರದಾಚೆ ತೀರ ಹುಡುಕಿದಂತೆ. ಹೀಗೆ ಒಂದು ದಿನ ಬೆಳಗ್ಗೆ ಎಂದಿನಂತೆ ಉಪಹಾರ ಮುಗಿಸಿ, ಕತ್ತಿಮಸೆದು, ಮೊಬೈಲ್ನಲ್ಲಿ ಹಾಡುಗಳನ್ನು ಆಲಿಸುತ್ತಾ ತೋಟಕ್ಕೆ ಹೋದವನು ಅಡಿಕೆ ಹೆಕ್ಕಿ, ಕೊಕ್ಕೊ ಕೊಯ್ದು, ದನಗಳಿಗೆ 2 ಕಟ್ಟ ಹುಲ್ಲು ಕತ್ತರಿಸಿ ಮನೆಗೆ ಮರಳಿದಾಗ ಮಧ್ಯಾಹ್ನ 1 ಗಂಟೆ. ಹೊಟ್ಟೆ ಸಣ್ಣ ಮಟ್ಟಿನಲ್ಲಿ ತಾಳ ಹಾಕಲು ಪ್ರಾರಂಭಿಸಿತ್ತು ಅಷ್ಟರಲ್ಲೇ 'ಊಟಕ್ಕೆ ತಯಾರಾಗಿದೆ ಬೇಗ ಸ್ನಾನ ಮಾಡಿ ಬಾ' ಎಂಬ ಅಮ್ಮನ ಕೂಗು ಕೇಳಿ ಹಸಿವು ಜೋರಾಗತೊಡಗಿತು. ಆ ಕೂಡಲೆ ಸ್ನಾನ ಮಾಡಿ ಮಧ್ಯಾಹ್ನದ ಭೋಜನ ಮುಗಿಸಿ ಟಿವಿ  ಚಾನಲ್ ತಿರುಗಿಸುತ್ತಿದ್ದವನ ಕಣ್ಣುಗಳು ನಿದ್ರೆ ಬೇಕೆಂದು ಹಟ ಹಿಡಿದವು. ಆ ಹಟಕ್ಕೆ ಮಣಿದು ಸಣ್ಣಗಿನ ಒಂದು ನಿದ್ದೆ ಮಾಡಿ, ಎದ್ದವನೇ ಕಾಫಿ ಹೀರುತ್ತಾ ವೇಪರ್ ಕೈಗೆತ್ತಿಕೊಂಡು ಮೇಲಿಂದ ಮೇಲೆ ಗಮನಿಸುತ್ತಿದ್ದೆ. ಹೀಗೆಯೇ ಯಾವುದೋ ಒಂದು ಲೇಖನ ಓದುವುದರಲ್ಲಿ ಮಗ್ನನಾಗಿದ್ದ ನನಗೆ ಪರಿಚಿತ ಹಕ್ಕಿಯ ಧ್ವನಿಯೊಂದು ಆಗಾಗ ಅಡ್ಡಿಪಡಿಸುತ್ತಿತ್ತು. ಮನಸ್ಸು ಲೇಖನದಿಂದ ಪಕ್ಷಿಯ ಕೂಗಿನೆಡೆ ವಾಲ ತೊಡಗಿತು. ಥಟ್ಟನೆ ಹೊಳೆಯಿತು ಒಮ್ಮೆ ಕೆಮರಾದೊಂದಿಗೆ ಹೊರಗಡೆ ಸುತ್ತಾಡಿಬಂದರೆ ಹೇಗೆ! ಕೆಲಸದ ಜಂಜಾಟಗಳಿಂದ ಮುಕ್ತಿಸಿಕ್ಕ ಹಾಗೂ ಆಗುತ್ತದೆ, ಧೂಳು ಹಿಡಿದ ಹವ್ಯಾಸಕ್ಕೆ ಜೀವನೀಡಿದಂತೆಯೂ ಆಗುತ್ತದೆ ಎಂಬ ಆಲೋಚನೆ ಮನಸ್ಸಿನಲ್ಲಿ ಸುಳಿದಾಡಿದೊಡನೆ ತಡಮಾಡದೇ ಗಾಡ್ರೇಜ್ನಲ್ಲಿ ಭದ್ರವಾಗಿರಿಸಿದ್ದ ಕೆಮರಾ ಹೊರ ತೆಗೆದು ಟ್ರೈಪಾಡ್ ಇತಾದಿ ಅಗತ್ಯ ಉಪಕರಣಗಳೊಂದಿಗೆ ಹೊರಟೆ. ಎಂದಿನಂತೆ ಅಡುಗೆ ಮನೆಯಿಂದ ಅಮ್ಮನ ಡೈಲಾಗ್ ಅಶರೀರವಾಣಿಯಂತೆ ಕೇಳಿಬಂತು  ಮತ್ತೆ ಸುರು ಮಾಡಿಡ್ಯಾ ಬೆಡದ ಕೆಲಸ ಉತ್ತರ ನೀಡಬೇಕಾದ ಅವಶ್ಯಕತೆ ಕಾಣಿಸಲಿಲ.್ಲ ಯಾಕಂದ್ರೆ ಅದು ಕೋಲು ಕೊಟ್ಟು ಪಟ್ಟು ತಿಂದ ಹಾಗೆ ಆಗುತ್ತದೆ ಎಂದು ಮೊದಲೇ ಗೊತ್ತಿದ್ದರಿಂದ ತೆಪ್ಪಗೆ ಮನೆ ಹಿಂದುಗಡೆ ಇರುವ ಕಾಡಿನೆಡೆಗೆ ನನ್ನಷ್ಟಕ್ಕೆ ಹೆಜ್ಜೆ ಹಾಕತೊಡಗಿದೆ. ಹೊರಗಡೆ ಬಿಸಿಲ ಛಳ ಮೈ ಸುಟುವಂತಿದ್ದರೆ ಆ ಕಾಡಿನೊಳಕ್ಕೆ ಕೊಕ್ಕೊಡನೆ ತಣ್ಣನೆಯ ಗಾಳಿ ನಯವಾಗಿ ಬೀಸುತ್ತಿತ್ತು. ಎಲ್ಲೆಲ್ಲೂ ಪ್ರಶಾಂತ ನಿಶ್ಯಬ್ದ, ಮನಸ್ಸಿಗೆ ಎಲ್ಲೂ ಸಿಗದ ಆನಂದವನ್ನು ನೀಡಿದ ಕಾಡಿನೆಡೆಗೆ ಒಂದು ರೀತಿಯ ಪೂಜ್ಯ ಭಾವ ಮೂಡಿತು. ಹೀಗೆ ಕಾಡಿನ ಮೋಹಕ ಸೌಂದರ್ಯವನ್ನು ಆನಂದಿಸುತ್ತಾ ಮುಂದೆ ಸಾಗಿದಂತೆ ಅನತಿ ದೂರದಲ್ಲಿ ಹಕ್ಕಿಯೊಂದು ಕೂಗುತ್ತಿರುವುದು ಕೇಳಿಸಿತು. ಶಬ್ದವೇದಿ ಬಾಣದಂತೆ ಆ ಕೂಗನ್ನೇ ಹಿಂಬಾಲಿಸುತ್ತಾ ಹೊರಟೆ ಹೀಗೆ ಒಂದಷ್ಟು ದೂರ ಸಾಗಿಡೊಡನೆ ಭವ್ಯವಾಗಿ ಬೆಳೆದುನಿಂತಿರುವ ನೆಲ್ಲಿ ಮರದ ಮೇಲೆ ಗಿಜಗ ಹಕ್ಕಿಯೊಂದು ಕುಳಿತು ಕೂಗುತ್ತಿತ್ತು. ಪಕ್ಕದಲ್ಲಿ ಅರೆ ನಿಮರ್ಾಣವಾದ ಗೂಡು ಕಾಣಿಸಿತು. ಅದು ಗೂಡು ಕಟ್ಟುವುದರಲ್ಲಿ ನಿರತವಾಗಿದ್ದು ಹೆಣ್ಣು ಹಕ್ಕಿಯನ್ನು ಆಕಷರ್ಿಸಲು ಕೂಗುತ್ತಿರುವುದು ಸ್ಪಷ್ಟವಾಯಿತು. ಕೂಡಲೇ ಮರೆಯಲ್ಲಿ ನಿಂತು ಅದನ್ನೇ ಗಮನಿಸತೊಡಗಿದೆ. ಫೋಟೊ ಕ್ಲಿಕ್ಕಿಸತೊಡಗಿದೆ. ಅದಂತೂ ಕೂಗುತ್ತಲೇ ಗೂಡು ನೇಯುವ ಕಾಯಕದಲ್ಲಿ ನಿರತವಾಗಿತ್ತು. ಅದನ್ನು ಸೂಕ್ಷವಾಗಿ ಗಮನಿಸಿದೆ ಒಂದೂ ಅರ್ಥವಾಗಲಿಲ್ಲ. ಅದು ಒಂದು ಹುಲ್ಲು ಕಡ್ಡಿಯನ್ನು ಯಾವರೀತಿ ನೇಯುತ್ತಿದೆ, ಅದರ ಸ್ಟ್ರಾಟಜಿ ಏನಿದೆ ಎಂದೇ ಅರ್ಥವಾಗಲಿಲ್ಲ. ನನಗೆ ಏಕೆ ಸಿವಿಲ್ ಇಂಜಿನೀಯರ್ಗಳಿಗೂ ಅರ್ಥವಾಗದ ವಿನ್ಯಾಸ ಶೈಲಿ ಅವುಗಳದ್ದು. ಹೀಗೆ ಎರಡನೇ ದಿನವೂ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಹಕ್ಕಿಯನ್ನೇ ಗಮನಿಸುವ ಕಾಯಕದಲ್ಲಿ ತೊಡಗಿದ್ದೆ. ಈ ಹವ್ಯಾಸವೇ ಹಾಗೆ ಎಲ್ಲಾ ಜಂಜಾಟಗಳನ್ನು ಮರೆಸಿ ತನ್ನತ್ತ ಸೆಳೆಯುತ್ತದೆ. ಹೀಗೆ ಮೂರನೇ ದಿನ ಇದರ ಕೂಗು ಕೇಳಿಸಿ ಹಕ್ಕಿಯೊಂದು ಪಕ್ಕದ ರೆಂಬೆಯಲ್ಲಿ ಕುಳಿತು ಗೂಡನ್ನೇ ವಿಕ್ಷಿಸುತ್ತಿತ್ತು. ಅದು ಹೆಣ್ಣು ಹಕ್ಕಿ ಎಂಬುದು ಸಿಸ್ಸಂಶಯವಾಗಿತ್ತು. ಈ ಗಂಡು ಹಕ್ಕಿಯಂತೂ ಅದನ್ನು ಇಂಪ್ರೆಸ್ ಮಾಡುವ ಉದ್ದೇಶದಿಂದ ಇದೋ ನೋಡು ಬಾಗಿಲನ್ನು ಹೀಗೆ ವಿನ್ಯಾಸಗೊಳಿಸಿದ್ದೇನೆ, ಒಳ ವಿನ್ಯಾಸ ಹೀಗಿದೆ, ಇಷ್ಟು ಸುಭದ್ರವಾಗಿದೆ ಎಂದು ವಿವರಿಸುವ ರೀತಿಯಲ್ಲಿ ತನ್ನದೇ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿತ್ತು. ಆ ಹೆಣ್ಣುಹಕ್ಕಿಯೂ ಇದರೆಡೆಗೆ ಆಕಷರ್ಿತವಾಗಿರುವಂತೆ ಭಾಸವಾಯಿತು. ಆದರೆ ಒಮ್ಮೆ ಗೂಡು ನೋಡಿದ ಆ ಹಕ್ಕಿ ಸುಮ್ಮನೆ ಹಾರಿ ಹೋಯಿತು, ಅದರೊಂದಿಗೆ ಗಂಡೂ ಹಾರಿ ಹೊಯಿತು. ನನಗೇನೂ ಅರ್ಥವಾಗಲಿಲ್ಲ. ಕೆಲಹೊತ್ತು ಕಳೆಯಿತು ಆದರೂ ಅವುಗಳ ಪತ್ತೆ ಇಲ್ಲ. ಇರಲಿ ನಾಳೆ ನೋಡೊಣವೆಂದು ಮನೆಗೆ ಮರಳಿದೆ. ಮರುದಿನ ಆಸಕ್ತಿಯಿಂದ ಬೆಳಗ್ಗೆ 6 ಗಂಟೆಗೆ ಒಂದು ಬುತ್ತಿಯಲ್ಲಿ ತಿಂಡಿ, ಪ್ಲಾಸ್ಕ್ನಲ್ಲಿ ಕಾಫಿ, ಒಂದು ಬಾಟಲಿ ನೀರಿನ ಸಹಿತ ಮರದ ಬುಡಕ್ಕೆ ಹೋದವನೇ ಮಾಮೂಲಿಯಂತೆ ಮರೆಯಲ್ಲಿ ಕೂರು ವೀಕ್ಷಿಸತೊಡಗಿದೆ. ಆ ಹಕ್ಕಿಗಳು ಜೋಡಿಯಾಗಿರುವುದು ಖಚಿತವಾಯಿತು. ಅವುಗಳು ಎಷ್ಟು ಸಂಭ್ರಮಿಸಿದ್ದವೋ ಗೊತ್ತಿಲ್ಲ, ಆದರೆ ವಿಷಯ ತಿಳಿದು ಅದಕ್ಕಿಂತಲೂ ಹೆಚ್ಚಿನ ಸಂಭ್ರಮ ನನಗಾಗಿತ್ತು. ಹೀಗೆ ಮತ್ತೆರಡು ದಿನಗಳಲ್ಲಿ ಅವು ಗೂಡನ್ನು ಪ್ರತರ್ಿಯಾಗಿ ನಿಮರ್ಿಸಿದ್ದವು. ಅದು ಎಷ್ಟು ಸುಂದರವಾಗಿತ್ತೆಂದರೆ ಹೆಚ್ಚು ಹಕ್ಕಿ ಏಕೆ ಹೆಣ್ಣು ಹುಡುಗಿಯೇ ಆಕಷರ್ಿತಳಾಗುವಷ್ಟು ಚಿತ್ತಾರಮಯವಾಗಿತ್ತು. ಹಲವು ದಿನಗಳಿಂದ ಅವುಗಳ ಚಲನವಲನಗಳನ್ನು ಗಮನಿಸಿ ಫೊಟೊ ಕ್ಲಿಕ್ಕಿಸುತ್ತಿದ್ದ ನನ್ನನ್ನು ಅವು ಗಮನಿಸಿದ್ದವೋ ಏನೊ! ಕೆಲವೊಮ್ಮ ನನ್ನೆಡೆಗೆ ನೋಡಿ ಕೂಗುತ್ತಿದ್ದವು, ಅವು ನನ್ನೊಡನೆ ಏನೋ ಮಾತನಾಡುತ್ತಿರುವಂತೆ ಭಾಸವಾಗುತ್ತಿತ್ತು ಆದರೆ ಪ್ರತಿಕ್ರಿಯಿಸೋಣವೆಂದರೆ ಅವುಗಳ ಭಾಷೆ ನನಗೆಲ್ಲಿ ಅರ್ಥವಾಗುತ್ತೆ! ಬಹುಷಃ ಅವುಗಳಿಗೆ ನನ್ನಿಂದೇನೂ ತೊಂದರೆ ಇಲ್ಲ ಎಂದು ಮನವರಿಕೆಯಾಗಿರಬೇಕು. ಮತ್ತೆ ಹಲವು ದಿನಗಳ ಕಾಲ ದಿನಕ್ಕೊಮ್ಮೆ ಹೋಗಿ ನೋಡಿ ಬರುತ್ತಿದ್ದೆ. ಹೇಳಿಕೊಳ್ಳುವಂತಹ ವಿಶೇಷವೇನೂ ಇರಲಿಲ್ಲ. ಆದರೆ ಒಂದು ದಿನ ಹೆಣ್ಣು ಹಕ್ಕಿಯು ಗೂಡಿನಲ್ಲೇ ಕುಳಿತಿರುವುದನ್ನು ಕಂಡು ಬಹುಷಃ ಮೊಟ್ಟೆ ಇಟ್ಟಿರಬಹುದು ಎಂದು ಅಂದಾಜಿಸಿ ಪಕ್ಕದ ಮರ ಹತ್ತಿ ಗಮನಿಸಿದೆ. ಊಹೆ ನಿಜವಾಗಿತ್ತು. ಆ ಬಳಿಕ 4 ದಿನಗಳಿಗೊಮ್ಮೆ ಗೂಡನ್ನು ವೀಕ್ಷಿಸಲು ಹೋಗುತ್ತಿದ್ದೆ. ಏಕೆಂದರೆ ಮೊಟ್ಟೆಯೊಡೆದು ಮರಿ ಹೊರಬರಲು ಹಲವು ದಿನಗಳಿದ್ದುದರಿಂದ ಆ ನಡೆವೆ ಅಂತಹ ವಿಶೇಷತೆಗಳೇನು ಇರುವುದಿಲ್ಲ. ಅದಲ್ಲದೇ ಇಷ್ಟು ದಿನ ಬಾಕಿ ಉಳಿಸಿದ ನನ್ನ ಇತರ ಕೆಲಸಗಳನ್ನೂ ಪೂರೈಸಬೇಕಾಗಿತ್ತಲ್ಲ! ಹಾಗಾಗಿ ಇತರ ಕೆಲಸಗಳಲ್ಲಿ ಮಗ್ನನಾದೆ. ಮುಂದೆ ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಗೋಡು ಇರುವ ಕಡೆ ಹೋದಾಗ ಅದೇನೋ ಹಕ್ಕಿಗಳೆರಡೂ ಮರದ ಹಿಂಬದಿತ್ತ ನೋಡಿ ವಿಚಿತ್ರವಾಗಿ ಕೂಗುತ್ತಿದ್ದವು. ಈಚಿನ ಹಲವು ದಿನಗಳಿಂದ ಅವುಗಳ ಒಡನಾಟದಲ್ಲಿ ಇದ್ದುದರಿಂದ ಸಾಮಾನ್ಯಮಟ್ಟಿಗೆ ಅವುಗಳ ವರ್ತತೆಯನ್ನು ಅಥರ್ೈಸಿಕೊಂಡಿದ್ದೆ. ಹಾಗಾಗಿ ಇಂದಿನ ಅವುಗಳ ವರ್ತನೆ ವಿಚಿತ್ರವಾಗಿದೆ ಎಂಬುದಂತೂ ಸ್ಪಷ್ಟವಾಗಿತ್ತು. ಹಕ್ಕಿಗಳು ಅಪಾಯದ ಲಕ್ಷಣಗಳು ಕಂಡಲ್ಲಿ ಮಾತ್ರ ಈ ರೀತಿಯಾಗಿ ಕೂಗುತ್ತವೆ ಎಂಬುದನ್ನು ನೋಡಿ ತಿಳಿದಿದ್ದರಿಂದ ತಕ್ಷಣ ನನ್ನ ಕೈಯಲ್ಲಿದ್ದ ಕೆಮರಾ, ಟ್ರೈಪಾಡ್ ಎಲ್ಲವನ್ನೂ ಅಲ್ಲೇ ಇಟ್ಟು ಕತ್ತಿಯನ್ನು ಕೈಯಲ್ಲಿ ಹಿಡಿದು ಮರದ ಹಿಂಬದಿಗೆ ಹೋಗಿ ನೋಡಿದೆ. ಅಬ್ಬ ನಾನು ಅವುಗಳಿಗಿಂತ ಹೆಚ್ಚಿಗೆ ಭಯಪಟ್ಟಿದ್ದೆ! ಅವುಗಳಾದರೂ ಭಯದಿಂದ ಚೀರುತ್ತಿದ್ದವು, ನನ್ನ ಪರೀಸ್ಥಿತಿ ಹೇಗಿತ್ತೆಂದರೆ ತಲೆಯೇ ಸ್ತಬ್ಧವಾಗಿತ್ತು, ಹೃದಯ ಬಡಿತ ಸ್ಕೆತಸ್ಕೋಪ್ ಇಲ್ಲದೆಯೇ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಯಾಕೆಂದರೆ ಅಲ್ಲಿ ಸಾಧಾರಣ ಗಾತ್ರದ ಹೆಬ್ಬಾವೊಂದು ಮರ ಹತ್ತುತ್ತಿತ್ತು. ಮೊದಲೇ ಹಾವುಗಳೆಂದ ಭಯಂಕರ ಹೆದರಿಕೆ ಹೊಂದಿದ ನಾನು ಅಲ್ಲಿಯೇ ನಿಂತಿದ್ದರೆ ಹಾಟರ್್ಫೈಲ್ ಆಗುವುದಂತೂ ಖಂಡಿತ ಎಂದು ಅಲ್ಲಿಂದ ದೂರ ಸರಿದೆ. ಆದರೆ ಆ ತಕ್ಷಣ ನನ್ನ ಗಮನ ಆ ಹಕ್ಕಿಗಳೆಡೆ ವಾಲಿತು, ಅವುಗಳು ನನ್ನನ್ನೇ ನೋಡಿ ಮತ್ತೂ ಜೋರಾಗಿ ಚೀರುತ್ತಿದ್ದವು, ಅವು ಮೂಕಪ್ರಾಣಿಗಳಾಗಿದ್ದರೂ ತಮ್ಮದೇ ರೀತಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದವು. ಅವುಗಳೊಡನೆ ಈಗಾಗಲೇ ಅನ್ಯೋನ್ಯತೆ ಬೆಳೆದಿದ್ದುದರಿಂದಲೋ ಏನೋ ಅವು ನನ್ನಲ್ಲಿ ಅತ್ಯಂತ ಭರವಸೆಯನ್ನಿಟ್ಟು ಈ ರೀತಿ ಅಂಗಲಾಚುತ್ತಿವೆ ಎಂದೆನಿಸಿತು. ಅವು ಒಮ್ಮೆ ನನ್ನೆಡೆಗೆ ನೋಡಿ ಚೀರುತ್ತಿದ್ದರೆ ಮತ್ತೊಮ್ಮೆ ಆ ಹಾವಿನೆಡೆಗೆ ನೋಡಿ ಚೀರುತ್ತಿದ್ದವು. ಅಷ್ಟರಲ್ಲೇ ಆ ಹಾವು ಗೂಡಿಗೆ ಸಮೀಪವಾಗಿತ್ತು. ಖಂಡಿತವಾಗಿ ಆ ಮೊಟ್ಟೆಗಳನ್ನು ತಿಂದು ಹಕ್ಕಿಗಳ ಸುಖ ಸಂಸಾರಕ್ಕೆ ಕೊಳ್ಳಿಯಿಡುವ ಅದರೊಂದಿಗೆ ನನ್ನ ನಿರೀಕ್ಷೆಗಳಿಗೂ ನೀರೆರೆಯುವ ಧಾವಂತದಲ್ಲಿ ಮುನ್ನುಗ್ಗುತ್ತಿತ್ತು.ಹಕ್ಕಿಯು ಗೂಡು ಹೆಣೆಯಲು ಪ್ರಾರಂಭಿಸಿದಂದಿನಿಂದ ಅವುಗಳನ್ನೇ ಗಮನಿಸುತ್ತಾ ಅವುಗಳ ಚೇಷ್ಟೆ, ಚಾಕಚಕ್ಯತೆ, ಸರಸ ಸಲ್ಲಾಪ ಇತ್ಯಾದಿಗಳ ಫೋಟೊ ತೆಗೆಯುತ್ತಾ ಇದ್ದ ನನಗೆ ಹಕ್ಕಿ ಮೊಟ್ಟೆ ಇಟ್ಟಿರುವುದನ್ನು ಕಂಡು ಆಗಿರುವ ಸಂತೋಷ ಹಕ್ಕಿಗಳಿಗೂ ಅರ್ಥವಾಗುವಂತಿತ್ತು. ಅವುಗಳಂತೆಯೇ ನಾನೂ ಮುಂದೆ ಹುಟ್ಟಲಿರುವ ಆ ಪುಟ್ಟ ಮರಿಗಳಿಗಾಗಿ ಕಾತರತೆಯಿಂದ ಕಾಯುತ್ತಿದ್ದೆ. ಈಗ ಈ ದರಿದ್ರ ಹಾವು ಆ ಮೊಟ್ಟೆಗಳನ್ನು ತಿಂದರೆ ನಮ್ಮ ಗತಿ! ಆ ನನ್ನ ಭಯಭೀತ ಮನಸ್ಸಿನೊಳಕ್ಕೆ ಹೀಗೊಂದು ದೂರಾಲೋಚನೆ ಥಟ್ಟನೆ ಹಾದು ಹೋಯಿತು. ಅಯ್ಯೋ! ಹೀಗಾಗಲು ಬಿಡಬಾರದು ಆ ಹಕ್ಕಿಗಳಿಗೆ ಈಗ ನಾನೇ ಆಸರೆ ಎಂದು ನಿರ್ಧರಿಸಿದವನೇ ನಾನು ತಂದಿದ್ದ ಕೋಲನ್ನು ತೆಗೆದು ಆ ಹಾವನ್ನು ಕೆಳಗೆ ಬೀಳಿಸಲು ಮುಂದಾದೆ.ತಕ್ಷಣ ನನ್ನ ಮುಂದೆ ನನ್ನದೇ ಪ್ರತಿರೂಪ ಪ್ರತ್ಯಕ್ಷವಾಗಿ ಏನು ಮಾಡುತ್ತಿದ್ದಿ ಮಾರಾಯ! ನಿನಗೆ ಹುಚ್ಚಾ! ಎಂದು ಉದ್ಗರಿಸಿ ಮಾಯವಾದಂತೆ ಭಾಸವಾಯಿತು. ಭ್ರಮಾಲೋಕದಿಂದ ಹೊರಬಂದ ಅನುಭವವಾಯಿತು. ಆ ಹಕ್ಕಿಗಳ ಚೀರಾಟ, ಅವುಗಳನ್ನು ರಕ್ಷಿಸಬೇಕೆಂಬ ತಲ್ಲಣ ಎಲ್ಲವೂ ಮರೆಯಾಯಿತು. ನಿಲರ್ಿಪ್ತ ಭಾವದಿಂದ ಮನಸ್ಸು ಸರಿ ತಪ್ಪುಗಳ ಹುಡುಕಾಟದಲ್ಲಿ ತಲ್ಲಿನವಾಯಿತು. ಹೌದು ನಾನು ಮಾಡುತ್ತಿರುವುದಾದರೂ ಏನು? ಸಹಾಯವೇ? ಹಾಗಾದರೆ ಯಾರಿಗೆ ಸಹಾಯ? ಅಥವಾ ಅಪಕಾರವೇ ಹಾಗಾದರೆ ಅದಾದರೂ ಯಾರಿಗೆ? ಇಲ್ಲಿ ಒಬ್ಬರಿಗೆ ಉಪಕಾರವಾದರೆ ಅದೇ ಇನ್ನೊಬ್ಬರಿಗೆ ಅಪಕಾರ. ಒಂದೆಡೆ ಸಹಾಯಕ್ಕಾಗಿ ಕೃತಜ್ಞತಾ ಭಾವವಾದರೆ ಇನ್ನೊಂದೆಡೆ ಅಪಕಾರಕ್ಕಾಗಿ ಶಾಪದ ಭಾವ. ಹೀಗಿರುವಾಗ ಪ್ರಕೃತಿಯ ನಿಯಮವನ್ನು ಉಲ್ಲಂಘಿಸಲು ನಾನು ಯಾರು?ಒಂದು ಪ್ರಶ್ನೆಗೆ ಉತ್ತರ ಹುಡುಕಲು ಮನಸ್ಸು ಅಲೆಮಾರಿಯಾಗಿ ಸುತ್ತುತ್ತಿರುವಾಗ ಇನ್ನೊಂದು ಪ್ರಶ್ನೆ? ಮತ್ತೊಂದು ಪ್ರಶ್ನೆ? ಮಗದೊಂದು ಪ್ರಶ್ನೆ? ಮನಸ್ಸಿನಲ್ಲಿ ಮೂಡುತ್ತಿದ್ದವು. ಈ ಕುಡುಕಾಟದ ಒತ್ತಡದಲ್ಲಿ ಮೈ ಬೆವರತೊಡಗಿತು. ಒಮ್ಮೆಲೆ ನಿದ್ದೆಯಿಂದ ಎದ್ದಂತೆ ಭಾಸವಾಯಿತು. ಕೂಡಲೇ ವಾಸ್ತವ ಗೋಚರಕ್ಕೆ ಬಂತು. ಅಷ್ಟಾಗಲೇ ಆ ಹಾವು ಎಲ್ಲಾ ಮೊಟ್ಟೆಗಳನ್ನು ತಿಂದು ಮೆಲ್ಲನೆ ಕೆಳಗಿಳಿಯುತ್ತಾ ನನ್ನತ್ತ ನೋಡುತ್ತಿತ್ತು. ಅದರ ಆಹಾರವನ್ನು ಕಸಿದುಕೊಳ್ಳದೇ ಉಪಕಾರ! ಮಾಡಿದ ಧನ್ಯತಾಭಾವಕ್ಕೊ? ಉತ್ತರವಿಲ್ಲದ ಪ್ರಶ್ನೆ!. ಇತ್ತ ಹಕ್ಕಿಗಳು ದುಖಃದ ಮಡುವಿನಲ್ಲಿ ಹೊರಳಾಡುತ್ತಾ. . . ಕಣ್ಣೀರಿಡುತ್ತಾ ನನ್ನತ್ತ ನೋಡಿ ಛೇ! ಎಂತಹ ನೀಚ ಜನ್ಮ ಈತನದ್ದು, ಇಷ್ಟೊಂದು ದಿನ ಭಾವನಾತ್ಮಕವಾಗಿ ಆತ್ಮೀಯತೆಯನ್ನು ತೋರಿ ಇದೀಗ ಇಂತಹ ಜೀವಸ್ಮರಣ ಹೋರಾಟದಲ್ಲಿ ಈ ರೀತಿಯಾಗಿ ನಮಗೆ ಮೋಸ ಮಾಡಿದನಲ್ಲಾ, ಇವನ ಪಾಪ ನೂರು ಜನ್ಮಕ್ಕೂ ನಿವಾರಣೆಯಾಗಲಾರದು ಎಂದು ತುಚ್ಛಭಾವದಿಂದ ಥೂ. . .  ಎಂದು ಉಗಿದಂತಾಯಿತು.ಅಷ್ಟರಲ್ಲೇ ಕಣ್ಣೀರು, ದುಖಃ ಸಂಪೂರ್ಣವಾಗಿ ನನ್ನ ನಿಯಂತ್ರಣಮುಕ್ತವಾದವು. ಅದೆಷ್ಟು ಅತ್ತಿದ್ದೇನೋ ಸಾಕೆಂದರೂ ಕಣ್ಣೀರು ನಿಲ್ಲಲಿಲ್ಲ, ಛೇ ನಾನು ಇವತ್ತೇ ಇತ್ತ ಬರಬೇಕಿತ್ತೇ? ನಿನ್ನೆ ಬಂದಿದ್ದರೆ ಈ ಹೃದಯ ವಿದ್ರಾವಕ ಘಟನೆಯನ್ನು ನೋಡುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲವಲ್ಲ? ಅಥವಾ ನಾಳೆ ಬಂದಿದ್ದರೂ ಒಂದಷ್ಟು ಬೇಸರವಾಗುತ್ತಿತ್ತೇ ವಿನಹ ಸಂದಿಗ್ಧ ಪರೀಸ್ಥಿತಿಗೆ ಬಲಿಪಶುವಾಗಬೇಕಾಗಿರಲಿಲ್ಲ ಎನಿಸಿತು.ಆ ಹಕ್ಕಿಗಳು ನನ್ನನ್ನು ತಮ್ಮ ಕುಟುಂಬದ ಭಾಗವಾಗಿ ಪರಿಗಣಿಸಿದ್ದವು, ನಮ್ಮ ಜಾತಿ ಬೇರಾದರೂ ವಿಚಿತ್ರವಾದ ಅನ್ಯೋನ್ಯತೆ ಬೆಳೆದಿತ್ತು. ಹಾಗಾಗಿ ಆ ಅನ್ಯೋನ್ಯತೆಗೆ ಬೆಲೆ ಕೊಟ್ಟಾದರೂ ಅವುಗಳನ್ನು ರಕ್ಷಿಸಬೇಕಿತ್ತೇ? ಹಾಗಾದರೆ ನಾನು ಮಾಡಿದ್ದು ತಪ್ಪೇ? ಅಥವಾ ಪ್ರಕೃತಿಧರ್ಮಕ್ಕೆ ಅಡ್ಡಿಪಡಿಸದೇ ಸುಮ್ಮನಿದ್ದುದೇ ಸರಿಯೇ?ಯಾವುದನ್ನು  ಸಮಥರ್ಿಸಿಕೊಂಡರೂ ಇನ್ನೊಂದಕ್ಕೆ ಮೋಸ ಮಾಡಿದಂತೆಯೇ!ದ್ವಂದ್ವ. . .ಮನಸ್ಸೆಲ್ಲಾ ದ್ವಂದ್ವ. . . ಮತ್ತದೇ ದ್ವಂದ್ವ !
ಕೆ.ನಾ.ಗೋರೆ
 

ದ್ವಂದ್ವ... ಮತ್ತದೇ ದ್ವಂದ್ವ ! ಭಾಗ-1

(ಗೂಗಲ್  ಚಿತ್ರ )

ಹಿನ್ನಲೆ: ನನ್ನಂತೆಯೇ ನನ್ನ ಬದುಕೂ ವಿಚಿತ್ರವಾಗಿತ್ತು!  ಕೆಲವರಿಗದು ಅರ್ಧಪೂರ್ಣವೆನಿಸಿದರೆ ಮತ್ತೆ ಹಲವರಿಗೆ ಅದು ನಿರರ್ಥಕವೆನಿಸುತ್ತಿತ್ತು. ಭಾರತೀಯತೆಯ ಪ್ರತೀಕವಾದ ನಾವ್ಯಾರೂ ನಮಗಾಗಿ ಬದುಕುವುದಿಲ್ಲ. ನಮ್ಮ ಬಹುಪಾಲು ಕೆಲಸಗಳು ಇತರರ ಪ್ರೇರೇಪಣೆಗೆ ಒಳಗಾಗಿರುತ್ತವೆ ! ಸಂಶಯವಿದ್ದಲ್ಲಿ ನಿಮ್ಮಲ್ಲೇ ಆತ್ಮವಿಮಶರ್ೆ ಮಾಡಿಕೊಳ್ಳಿ.ಒಂದು ಸಣ್ಣ ಉದಾಹರಣೆ ಹೇಳುವುದಾದರೆ ಕೆಲವು ಮನೆಗಳಲ್ಲಿ ಮುಖ್ಯವಾಗಿ ಹೆಂಗಸರು!(ಅಪವಾದಗಳ ಹೊರತಾಗಿ) ತಮ್ಮ ಮಗ ಬೆಂಗಳೂರಿನಲ್ಲಿ ದೊಡ್ಡ ಕಂಪನಿಯಲ್ಲಿ ದುಡಿಯುತ್ತಿದ್ದಾನೆ ಎಂದು ಊರೆಲ್ಲಾ ಹೇಳಿಕೊಂಡು ಬರುತ್ತಾರೆ. ಅಷ್ಟೇ ಆಗಿದ್ದರೆ ತೊಂದರೆ ಇರಲಿಲ್ಲಾ! ಆದರೆ ಅವರ ಮನಸ್ಸು ಅಲ್ಲಿಗೆ ಸಮಾಧಾನಗೊಳ್ಳುವುದಿಲ್ಲ ಇತರರ ಮಕ್ಕಳನ್ನು ನಮ್ಮ ಮಕ್ಕಳೊಡನೆ ತಕ್ಕಡಿಯಲ್ಲಿ ತೂಗುವ ಕೆಲಸ ಮಾಡುತ್ತಾರೆ. ಅಷ್ಟಕ್ಕೂ ಹೀಯಾಳಿಸುವ ಅವಕಾಶ ಸಿಕ್ಕರಂತೂ ಅದರ ಭರಪೂರ ಲಾಭ ಪಡೆಯುವಲ್ಲಿ ಕೆಲ ಹೆಂಗಸರದ್ದು ಎತ್ತಿದ ಕೈ. ಸೀರಿಯಲ್ಗಳ ಪ್ರಭಾವವೂ ಅದಕ್ಕೆ ಒಂದು ಮುಖ್ಯ ಕಾರಣ ಎಂಬುದನ್ನು ಸ್ಪಷ್ಟವಾಗಿ ಹೇಳಬಲ್ಲೆ. ವಾಸ್ತವವಾಗಿ ಅಂತಹ ಪಟ್ಟಣಗಳಲ್ಲಿ ದುಡಿಯುವ ಮಕ್ಕಳು ಪಡುವ ಕಷ್ಟ ಕಂಡರೆ ಖಂಡಿತ ಅದೊಂದು ಪಂಜರದ ಬದುಕು. ಹಾಗಂತ ಊರಿಗೆ ಬಂದು ಸ್ವಚ್ಛಂದವಾಗಿ ಬದುಕೋಣವೆಂದರೆ ದೊಡ್ಡಸ್ತಿಕೆ ಎಂಬ ಭೂತದಲ್ಲಿ ಲೀನರಾಗಿ ಒದ್ದಾಡುತ್ತಿರುವಾಗ ಆ ಭೂತ ಬಿಟ್ಟಿತೇ! ಅಂತಹವರಿಗೆ ಸಮಾಜದ ದೃಷ್ಟಿಯಲ್ಲಿ ಘನ್ಯ ಸ್ಥಾನ. ಆದರೆ ಇಂತಹ ತೋರ್ಪಡಿಸಿಕೊಳ್ಳುವಿಕೆ ಇಷ್ಟಪಡದ ನನ್ನಂತಹ ಕೆಲವರಿರುತ್ತಾರೆ. ಆದಷ್ಟು ಇನ್ನೊಬ್ಬರಿಗಾಗಿ ಬದುಕಬಾರದೆಂಬ ಭಾವದವರು. ಮೊಂಡು ಭಾವವೋ ತಿಳಿದಿಲ್ಲ!  ಕೆಲವರ ಪ್ರಕಾರ ಇರಬಹುದೇನೋ! ಅತೀ ಬುದ್ಧಿವಂತರೆಲ್ಲಾ ನಮ್ಮನ್ನು ನೋಡಿ ಉದ್ಧಾರವಾಗುವ ಲಕ್ಷಣಗಳೇ ಇಲ್ಲದ ಸ್ವಭಾವ ಎಂದು ಕರೆಯುವುದು ಇದಕ್ಕೇ ಇರಬಹುದು. ವಿರಳರಲ್ಲಿ ಅತೀ ವಿರಳರಿಗೆ ಮಾತ್ರ ನಮ್ಮ ಬದುಕು ಅರ್ಧಪೂರ್ಣ ಗೋಚರಿಸುತ್ತದೆ. ಅಂತಹ ಅತೀ ವಿರಳ ವ್ಯಕ್ತಿ ನಾನೊಬ್ಬನೇ ಇರಬಹುದೇನೋ! ಆಶ್ಚರ್ಯಪಡಬೇಕಾದ್ದಿಲ್ಲ.ಮನೆಯಲ್ಲೇ ಕೃಷಿ ಚಟುವಟಿಕೆಗಳನ್ನು ಮಾಡುತ್ತಾ, ಯಾರ ಹಂಗೂ ಇಲ್ಲದೇ ಜೀವ ಸಂಕುಲಗಳನ್ನು ಮನಸಾರೆ ಆನಂದಿಸುವ ಸ್ವಭಾವ ನನ್ನದು. ಹಳ್ಳಿಯ ಸೌಂದರ್ಯ, ಪ್ರಾಣಿ ಪಕ್ಷಿಗಳ ಜೀವನ ಶೈಲಿ ತಿಳಿಯುವುದೆಂದರೆ ಇಷ್ಟದ ಕೆಲಸ. ಅದೊಂದು ಸುಂದರ ಅನುಭವ ನೀಡುವ ಹವ್ಯಾಸವೂ ಹೌದು. ಇಲ್ಲಿ ಪ್ರಕೃತಿಯೇ ಶಿಕ್ಷಕ, ಯಾರ ಹಂಗೂ ಇಲ್ಲದೆ ಸ್ವಚ್ಛಂದವಾಗಿ ಬದುಕುವ ಇಂತಹ ಅವಕಾಶ ಹಳ್ಳಿಗಳಲ್ಲಿ ಅಲ್ಲದೇ ಬೇರೆಲ್ಲಿ ಸಿಗಲು ಸಾಧ್ಯ! ಫೋಟೊಗ್ರಫಿ ನನ್ನ ನೆಚ್ಚಿನ ಹವ್ಯಾಸ. ತಥಾ ಪ್ರಾಣಿ ಪಕ್ಷಿಗಳ ಫೋಟೊ ತೆಗೆಯುವುದೆಂದರೆ ಎಲ್ಲಿಲ್ಲದ ಆಸಕ್ತಿ. ಹಳ್ಳಿಗರಿಗೆ ಇಂತಹ ಹವ್ಯಾಸಗಳೆಲ್ಲವೂ ಕೆಲಸ ಇಲ್ಲದವರು ಮಾಡುವ ನಿರುಪಯುಕ್ತ ಕೆಲಸ. ಒಂದರ್ಥದಲ್ಲಿ ನಿರುಪಯುಕ್ತ ಎನಿಸುವುದರಲ್ಲಿ ಖಂಡಿತ ತಪ್ಪಿಲ್ಲ. ಯಾಕೆಂದರೆ ಅವರು ಅದೆಷ್ಟೋ ಸಮಯದಿಂದ ಆ ಪ್ರಾಣಿ ಪಕ್ಷಿಗಳನ್ನು ನೋಡುತ್ತಲೇ ಬದುಕಿದವರು ಹಾಗಾಗಿ ಆ ಬಗೆಗೆ ಸಹಜ ತಾತ್ಸಾರ. ಅದಕ್ಕೇ ನನ್ನನ್ನು ಕಂಡವರೆಲ್ಲಾ ಇವನಿಗೆ ಬೇರೆ ಕೆಲಸವಿಲ್ಲ ಎಂದು ಹೀಯಾಳಿಸುತ್ತಿದ್ದರೋ ಏನೋ! ಅದೆಲ್ಲವೂ ನನ್ನ ಕಿವಿಗಳಿಗೆ ಬಿದ್ದರೂ ನನ್ನ ಕರ್ಣಪಟಲಗಳ ವರೆಗೆ ತಲುಪುತ್ತಲೇ ಇರಲಿಲ್ಲ. ನನ್ನ ಹವ್ಯಾಸ ಬಗ್ಗೆ ನನಗೆ ಸರಿಯಾದ ಅರಿವಿದ್ದ ಕಾರಣ ಯಾವ ಮಾತುಗಳೂ ನನ್ನನ್ನು ವಿಚಲಿತನಾಗಿಸುತ್ತಿರಲಿಲ್ಲ. ಅದೆಲ್ಲಾ ಬಿಡಿ...ಇಲ್ಲಿ ನಾನು ಹೇಳಬೇಕಾದದ್ದು ಬೇರೆಯೇ ಇದೆ, ದ್ವಂದ್ವ ಎಂಬ ಶೀಷರ್ಿಕೆಯಡಿ ವಾಸ್ತವ ಕಲ್ಪನೆಗಳನ್ನು ಕಥಾ ರೂಪದಲ್ಲಿ ಬರೆಯುವ ಪ್ರಯತ್ನ ಮಾಡಿದ್ದೇನೆ.

ಈ ಹುಚ್ಚು ಬರಹದಲ್ಲಿ ಎಲ್ಲಾದರೂ ಹುರುಳು ಹುಡುಕುವ ಮನಸ್ಸಿದ್ದರೆ ಜೈ ಎಂದು ಓದು ಮುಂದುವರೆಸಿ, ತಪ್ಪಿದ್ದಲ್ಲಿ ತಿಳಿಸಿ.


ಶುಕ್ರವಾರ, ಸೆಪ್ಟೆಂಬರ್ 27, 2013

ಕಾಲ ನಿಲುವುದೆ !





ಕಾಲ ನಿಲುವುದೆ !
ಕಾಲ ನಡೆವುದು ನಡೆಯುತಲಿರುವುದು
ನಾವು ನಿಂತರೆ ಕಾಲ ನಿಲುವುದೆ
ಮಿಂಚಿ ಹೋಗುವ ಒಂದು ಗಳಿಗೆಯು
ಬದುಕಿನ ಒಂದು ಪುಟವು ಚಿರವಾಗಿ ಮಡಚಿದಂತೆ,
ಕಾಲದಲ್ಲಿ ನೀನನಾಗುವ ತನಕ ವ್ಯರ್ಥ ಮಾಡದಿರು ಬಂದ ಗಳಿಗೆಯ
ಏನಾದರೊಂದನು ಮಾಡು, ಆದರೆ ಸದಾ ಎಲ್ಲರಿಗೂ ಒಳಿತನ್ನೇ ಮಾಡು 

ಬುಧವಾರ, ಸೆಪ್ಟೆಂಬರ್ 11, 2013

ಗಣೇಶ ಚತುರ್ಥಿಯ ಸಂಭ್ರಮ : ಕೆಮರಾ ಕಣ್ಣಲ್ಲಿ ನನ್ನ ಕೈಚಳಕ


 ವಿದ್ಯುತ್ ಬೆಳಕಿನಲ್ಲಿ ಪಿಂಗಾರದ ಶೃಂಗಾರ
 ಒಂದೇ ದೀಪ ನೂರಾರು ಅರ್ಥಗಳು


ಮಳೆಗಾಲದ ವೈಯ್ಯಾರದ ಚೆಲುವೆ

E°è ¢Ã¥ÀªÀ£ÀÄß §zÀÄQUÉ ºÉÆÃ°¸ÀĪÀÅzÁzÀgÉ vÉgɪÀÄgÉAiÀÄ°è «WÀß«£Á±ÀPÀ£ÀÄ vÀ£Àß vÁ¼ÀPÉÌ vÀPÀÌAvÉ PÀÄt¸ÀĪÀ ¸ÀÆvÀæzsÁgÀ£ÀAvÉ UÉÆÃZÀj¸ÀÄvÁÛ£É.

ಶುಕ್ರವಾರ, ಸೆಪ್ಟೆಂಬರ್ 6, 2013

ಕ್ಷೀರ ಸಾಗರದೆಡೆಗೆ ಪ್ರಯಾಣ


ನಾನೂ ಸೇರಿದಂತೆ ಕೆಂಪ, ಪ್ರಭಂಜು, ಕೃಷ್ಣ, ಶಿವಾನಂದ ಕ್ಷೀರ ಸಾಗರಕ್ಕೆ ಸಾಗಿದ ಪ್ರವಾಸಿ 
ಕಿರು ಬರಹ

'ಅದೊಂದು ಅತಿ ಸುಂದರ, ಅವಿಸ್ಮರಣೀಯ ಹಾಗೂ ವಿಚಿತ್ರಾನುಭವಗಳನ್ನು ನೀಡಿದ ಅಚ್ಚಳಿಯದ ಸವಿಯಾದ ಅನುಭವ'.



ನನ್ನ ಮಟ್ಟಿಗೆ ತಿರುಗಾಟವೆಂದರೆ ದೇಹ ಒಪ್ಪದಿದ್ದರೂ ಮನಸ್ಸು ಕೇಳದ ಪ್ರವೃತ್ತಿ! ಅದೊಂದೇ ಮನಸ್ಸಿನ ಎಲ್ಲಾ ನೋವುಗಳನ್ನು ಸೀಮಿತಾವಧಿಯವರೆಗೆ ಮರೆಮಾಚುವ ದಿವ್ಯಾಔಷಧ ಎಂಬುದು ನನ್ನ ಧೃಡವಾದ ನಂಬಿಕೆ.ನಾವು ಈವರೆಗೆ ಕೈಗೊಂಡ ಟ್ರಿಪ್ಗಳೆಲ್ಲಾ ಒಂದು ಲೆವೆಲ್ಲಿಗೆ ಸಣ್ಣವುಗಳೆಂದೇ ಹೇಳಬಹುದು. ಆದರೂ ಪ್ರತೀ ಬಾರಿಯೂ ನಾವು ಸರಿಯಾಗಿ ಯೋಚಿಸಿಯೇ ಮುನ್ನಡೆಯುತ್ತಿದ್ದೆವು ಹಾಗೂ ರಜೆಯ ಅಭಾವದಿಂದ ಹತ್ತಿರದ ಪ್ರದೇಶಗಳನ್ನೇ ಆರಿಸುತ್ತಿದ್ದೆವು. ಆದರೆ ಈ ಬಾರಿ ನಮ್ಮ ದೃಷ್ಟಿ ಒಂದಷ್ಟು ದೂರಕ್ಕೆ ನೆಟ್ಟಿತ್ತು. ಅದೂ ಸ್ವರ್ಗದಿಂದಲೇ ಗೋಮಾತೆ ನಮಗಾಗಿ ಶುಭ್ರ ಹಾಲಿನ ಹೊಳೆಯನ್ನೇ ಅವಿರತವಾಗಿ ಹರಿಸುತ್ತಿದ್ದಾಳೋ ಎಂಬ ಬಾವನೆಯನ್ನು ಅಭಿವ್ಯಕ್ತಪಡಿಸಬಲ್ಲ ನೆರೆಯ ಗೋವಾ ರಾಜ್ಯದಲ್ಲಿರವ ದೂದ್ ಸಾಗತ್ ನತ್ತ ! ಇತ್ತೀಚಿಗಂತೂ ಚೆನೈ ಎಕ್ಸ್ಪ್ರೆಸ್ ಚಿತ್ರದಲ್ಲಿ ಇದರ ದೃಶ್ಯ ಕಂಡ ಮೇಲಂತೂ ಎಲ್ಲರಿಗೂ ಇದು ಪರಿಚಿತ. ಆದರೆ ಜನರು ದೂದ್ ಸಾಗತ್ ಚೆನೈಯಲ್ಲಿದೆ ಎಂದೇ ತಪ್ಪಾಗಿ ತಿಳಿದುಕೊಂಡಿದ್ದಾರೆ. ಸಿನೆಮಾದಲ್ಲಿ ದೂದ್ಸಾಗರ್ನ ರಮಣೀಯತೆಯನ್ನು ಚೆನ್ನಾಗಿಯೇ ಸೆರೆ ಹಿಡಿದಿದ್ದಾರೆ ಆದರೆ ಅದು ತಂತಹ ತಪ್ಪು ತಿಳುವಳಿಕೆಗೆ ಕಾರಣವಾದ್ದು ಮಾತ್ರ ವಿಪಯರ್ಾಸ. ವಾಸ್ತವತೆ ಏನೇಂದರೆ ದೂದ್ಸಾಗರ್ ಇರುವುದು ಗೋವಾ ರಾಜ್ಯದಲ್ಲಿ !ನಾವು ಕೇಲವ 1 ವರೆ ದಿನಗಳ ಈ ಪ್ರಯಾಣಕ್ಕೆ ಪ್ರಾಥಮಿಕ ಪೂರ್ವಸಿದ್ಧತೆಗಳನ್ನು ಮಾಡಿದ್ದರೂ ಅಲ್ಲಿಗೆ ತಲುಪುವ ಹಾಗೂ ಸರಿಯಾದ ಕಾಲಮಿತಿಯಲ್ಲಿ ಮರಳುವ ಕುರಿತು ಎಲ್ಲಿಯೂ ಸ್ಪಷ್ಟ ಮಾಹಿತಿಯೇ ದೊರಕಲಿಲ್ಲ. ಆದ್ದರಿಂದ ನಮ್ಮ ಈ ಪ್ರಯಾಣವನ್ನು ಮೊಂಡು ಧೈರ್ಯದ ದಿಟ್ಟ ನಿಧರ್ಾರ ಎಂದೇ ಹೇಳಬಹುದು. ಹೀಗೆ ಸಪ್ಟೆಂಬರ್ 31ನೇ ಶನಿವಾರದಂದು ನಮ್ಮ ಪ್ರಯಾಣ ನಿಗದಿಯಾಗಿತ್ತು. ಅಂತೆಯೇ ಮಂಗಳೂರಿನಿಂದ ಮಡ್ಗಾವ್ಗೆ ಸಾಗುವ ರಾತ್ರಿ 11.30 ರ ರೈಲಿನಲ್ಲಿ ನಮ್ಮ ಪ್ರಯಾಣ ಪ್ರಾರಂಭಗೊಂಡಿತು. ಅದೇನೋ ಸರಿಯಾದ ಪ್ಲಾನಿಂಗ್ ಮಾಡಿಲ್ಲದ ಕಾರಣ ಎಲ್ಲರ ಮಸಸ್ಸಿನಲ್ಲೂ ಟೆನ್ಶನ್ ಟಿಂಟೆಡ್ ಗ್ಲಾಸಿನ ಹಿಂದಿನ ದೃಶ್ಯದಂತೆ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ನಮ್ಮದು ಜನರಲ್ ಬೋಗಿ ಆದ್ದರಿಂದ ಎಲ್ಲರಿಗೂ ಕಷ್ಟದಲ್ಲಿ ಸೀಟ್ ಸಿಕ್ಕಿತು. ಎಲ್ಲರೂ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ನಿದ್ರೆಗೆ ಜಾರುವ ಪ್ರಯತ್ನಪಟ್ಟೆವು. ಕೆಂಪ, ಪ್ರಭಂಜು, ಶಿವಾನಂದ ಬೆಳಗ್ಗಿನವರೆಗೆ ನಿದರ್ೆಗೆ ಜಾರುವ ಪ್ರಯತ್ನದಲ್ಲೇ ಕಾಲ ಕಳೆದರು.ನಮ್ಮ ಮುಂದಿನ ಪ್ರಯಾಣದ ಕುರಿತು ಸಚಿತ್ರವಾಗಿ ಸಣ್ಣದಾಗಿ ವಿವರಿಸುತ್ತೇನೆ. ನೀವು ಎಲ್ಲವನ್ನು ನೋಡಿ ಓದುವಷ್ಟು ತಾಳ್ಮೆವಹಿಸಬೇಕಷ್ಟೆ. !.ದೂದ್ ಸಾಗರ್ಹೋಗುವ ಮನಸ್ಸಿದ್ದವರಿಗೆ ಖಚಿಡಿತವಾಗಿ ಇದೊಂದು ಉತ್ತಮ ಮಾರ್ಗಸೂಚಿಯಾಗಬಲ್ಲದು.ಇಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ. ಏಕೆಂದರೆ ನಿಮಗೆ ಅರಿವಿರುವಂತೆ ಪ್ರಯಾಣ ಸಣ್ಣದಿರಲಿ, ದೊಡ್ಡದಿರಲಿ ಇವೆರಡನ್ನೂ ಸರಿಯಾಗಿ ತಿಳಿದುಕೊಂಡು ಸಂಪೂರ್ಣ ಪೂರ್ವಸಿದ್ಧತೆಗಳೊಂದಿಗೆ ಸಾಗಬೇಕಾದ್ದು ಅತೀ ಮುಖ್ಯ. 


  ಮಡ್ಗಾವ್ ಸ್ಟೇಷನ್ : ದೂದ್ ಸಾಗರ್ ನೋಡುವ ತವಕದಲ್ಲಿ ರಾತ್ರಿ ಸರಿಯಾಗಿ ನಿದ್ರೆ ಇಲ್ಲದಿದ್ದರೂ ಉತ್ಸುಕತೆಯಿಂದ ಕಂಗೊಳಿಸುತ್ತಿರುವ ಮುಖಾರವಿಂದಗಳು


 ಮಡ್ಗಾವ್ನಿಂದ ಕೋಲಮ್ ಸಾಗುವ ಟ್ರೈನ್ನಲ್ಲಿ ಸುಖಾಸೀನರಾದ ನಮ್ಮ ಹುಡುಗರು.

 ಜೀವನವೇ ಬ್ಯಾಲೆನ್ಸ್ನಲ್ಲಿ ನಡೆದಾಡುವ ಸ್ಪಧರ್ೆ




 ಎಷ್ಟು ಬೇಡಿಕೊಂಡರೂ ನಮ್ಮನ್ನು ಬಿಟ್ಟು ಹೋಗಿ ನಮ್ಮನ್ನು ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುವಂತೆ ಮಾಡಿ ಎಲ್ಲರ ಶಾಪಕ್ಕೆ ಗುರಿಯಾದ ಟ್ರೈನ್ (ಚಾಲಕ)

 ರೈಲ್ವೆ ಟ್ರ್ಯಾಕ್ ಮೇಲಿನ ನಡಿಗೆ..ಉಹೂಂ ! ಹೋದವನಿಗಷ್ಟೇ ಗೊತ್ತು ಅದರ ಕಷ್ಟ

 ಅಯ್ಯೋ ಸಾಕಪ್ಪಾ ಸಾಕು !



ದಾರಿಯಲ್ಲಿ ಸಿಗುವ ಮೊದಲ ಟನಲ್. ಒಳಗೆ ತಂಪಾದ ವಾತಾವರಣ ಬಿಸಿಲಿಗೆ ಬೆಂದು ಬಂದವರಿಗೆ ಒಂದಷ್ಟು ಉಲ್ಲಾಸ ನೀಡುತ್ತದೆ.



 ದೂರದಿಂದ ಗೋಚರಿಸುವ ದೂದ್ ಸಾಗರ್




 ಮೃತ್ಯುಕೂಪ : ಸುಮಾರು 60 ಅಡಿ ಆಳದ ಗುಂಡಿ. ನೋಡಲು ಸಣ್ಣದಾಗಿ ಕಂಡರೂ ಅದರ ತಾಕತ್ತಿನ ಮುಂದೆ ಎಲ್ಲರೂ ಸಣ್ಣವರೇ !
 ದೂದ್ ಸಾಗರ್ ಸ್ಟೇಷನ್ಗೆ ಸಾಗುವಾಗ ಸಿಗುವ ಅತ್ಯಂತ ಸುಂದರ ಹಳೇಯ ಕಟ್ಟಡದ ಅವಶೇಷ. ಅದೇನೋ ಗತಕಾಲದ ಪ್ರತೀಕದಂತೆ ಅದೆಷ್ಟೋ ವರ್ಷಗಳಿಂದ ಮೂಕ ಸಾಡ್ಷಯಾಗಿ ಎಲ್ಲವನ್ನೂ ನೋಡುವಂತಿದೆ.




ಕೋಲಮ್ನಿಂದ ದೂದ್ ಸಾಗರ್ಗೆ ಬೈಕ್ ಮೇಲೆ ಸಾಗಿಸುವ ವ್ಯವಸ್ಥೆ ಇದೆ. ಆದರೆ ಅಪ್ ಆಂಡ್ ಡೌನ್ ಒಟ್ಟು 800 ರೂವರೆಗೆ ಖಚರ್ು ಮಾಡಬೇಕಾಗುತ್ತದೆ.ಟ್ರ್ಯಾಕ್ ಮೇಲೆ ನಡೆಯುವ ಮಜಾ ಮಾತ್ರ ಸಿಗುವುದಿಲ್ಲ.



 ನಿಮ್ಮ ದಾರಿ ನಿಮಗೆ ನನ್ನ ದಾರಿ ನನಗೆ ಎಂದು ಹೇಳುತ್ತಿರಬಹುದೇ ಈ ನಾಯಿ !
 ದೂದ್ ಸಾಗರ್ ಪರಿಪೂರ್ಣ ದೃಶ್ಯ

ಸರಿಸುಮಾರು 12 ರಿಂದ 13 ಕಿ.ಮೀ ಸುಡುಬಿಸಿಲಿಗೆ ನಡೆದು ಬಂದಾಗ ಸಂಪೂರ್ಣ ಬಸವಳಿದು ಹೊಗಿದ್ದೆವು. ಅಂತಹ ಸನ್ನಿವೇಶದಲ್ಲಿ ಈ ಫಾಲ್ಸ್ ಸಿಕ್ಕಿದ್ದು ಸ್ವರ್ಗ ಸಿಕ್ಕ ಹಾಗಾಯಿತು. ಅಲ್ಲಿನ ನೀರಿನ ಗುಣವೋ ಏನೋ ಆವರೆಗೆ ನಡೆದುಬಂದಾಗಿನ ಎಲ್ಲಾ ಆಯಾಸವೂ ಇತಿಹಾಸವಾಗಿ ಹೋಗಿತ್ತು. ಇಲ್ಲಿಂದಲೇ ಪ್ರಯಾಣ ಆರಂಬಿದ್ದೇವೋ ಎಂಬಷ್ಟು ಫ್ರೆಶ್ ಆಗಿತ್ತು.





 ದೂದ್ ಸಾಗರ ಸ್ಟೇಷನ್



ಇಲ್ಲಿ ಸ್ಟೇಷನ್ ಮಾಸ್ಟರ್ ಹಾಗೂ 4 ರಿಂದ 5 ಜನ ರೈಲ್ವೇ ಇಲಾಖೆಯವರನ್ನು ಬಿಟ್ಟರೆಮನುಷ್ಯವಾಸವೇ ಇಲ್ಲದ ನಿರ್ಜನ ಭಯಾನಕ ಪ್ರದೇಶ