ಶುಕ್ರವಾರ, ಜುಲೈ 19, 2013

ಕಾರಿಂಜೇಶ್ವರ ಟ್ರಿಪ್



ಕಾರಿಂಜೇಶ್ವರ ಟ್ರಿಪ್
ಏನ್ ಗಮ್ಮತ್ ಮಾರ್ರೆ !!!
ಅದೇನೋ ಕೆಲವು ಸಮಯದ ಹಿಂದೆ ಕಾರಿಂಜೆ ಸ್ಥಳದ ಪೋಟೋ ನೋಡಿದ್ದೆ. ಅಲ್ಲಿಗೆ ಒಮ್ಮೆ ಹೋಗ್ಬೇಕು ಅಂತ ಮನಸ್ಸಿನಲ್ಲಿ ಆಸೆ ತನ್ನಿಂತಾನೇ ಚಿಗುರಿ ಸೊಂಪಾಗಿ ಬೆಳಿಲಿಕ್ಕೆ ಸುರಾಯ್ತು. ಮನಸ್ಸು ಮಾಡಿದ್ದಿದ್ರೆ ಯಾವತ್ತೋ ಹೊಗ್ಬಹುದಿತ್ತು ಯಾಕಂದ್ರೆ ಆ ಸ್ಥಳ ಮಂಗಳೂರಿನಿಂದ ಬಹಳ ದೂರದಲ್ಲೇನೂ ಇಲ್ಲ. ಅದಲ್ಲದೇ ನನ್ನತ್ರ ನನ್ನ ಫೇವರಿಟ್ ಬೈಕ್ ಬೇರೆ ಉಂಟಲ್ಲಾ! ಸೋ ಹೇಗೂ ಹೋಗ್ಬಹುದಿತ್ತು. ಆದ್ರೆ ಅದೇನೋ ದೊಡ್ಡವರು ಹೇಳ್ತಾರಲ್ಲಾ ಎಲ್ಲದಕ್ಕೂ ಕಾಲ ಕೂಡಿ ಬರ್ಬೇಕು ಅಂತ. ಅದು ಕೂಡಿ ಬಲರ್ಿಲ್ವೇನೋ ದೇವ್ರಿಗೆ ಗೊತ್ತು.!!!
ಹೀಗೆ ಸರಿಯಾದ್ ಕಾಲ ಬಂದದ್ದು ಹೆಚ್ಚಿನಾಂಶ ಮೊನ್ನೆ ಅಂದ್ರೆ ಜೂನ್ 13 ರ ಶನಿವಾರ. ಆ ದಿನ ಅದೆನೋ ಥಟ್ ಅಂತ ಕಾರಿಂಜೆ ನೆನ್ಪಾಯ್ತು. ಹೇಗೂ ಈ ವಾರ ಊರಿಗೆ ಹೋಗುವ ಆಲೋಚನೆ ಇಲ್ಲ ಹಾಗಾಗಿ ಕಾರಿಂಜೆಗೆ ಹೋಗುದು ಅಂತ ಮನಸ್ಸಲ್ಲೇ ಡಿಸೈಡ್ ಮಾಡಿದೆ. ಯಾರ ಹತ್ರವೂ ಅದನ್ನು ಹೇಳ್ಳಿಲ್ಲ. ಕೂಡ್ಲೆ ಫುಲ್ ಆಗಿದ್ದ ಕೆಮರಾ ಮೆಮೊರಿ ಎಂಮ್ಟಿ ಮಾಡ್ಕೊಂಡು, ಎಂಮ್ಟಿ ಬ್ಯಾಟ್ರಿಯನ್ನು ಫುಲ್ ಚಾಜರ್್ ಮಾಡಿ ನನ್ನಷ್ಟಕ್ಕೆ ತಯಾರಾದೆ. ಮರುದಿನ ಅಂದ್ರೆ ಜುಲೈ 14ಕ್ಕೆ  ಬೆಳಿಗ್ಗೆ ಹೋಗುದು ಅಂತ ಅಂದ್ಕೊಂಡಿದ್ದೆ, ಆದ್ರೆ ಫಾರ್ ಪರ್ಸನಲ್ ರೀಸನ್ಸ್ ಮಧ್ಯಾಹ್ನ ಊಟ ಮಾಡಿ ಆಮೇಲೆ ಹೋಗುದು ಅಂತ ಡಿಸೈಡ್ ಮಾಡಿದೆ. ಮತ್ತೆ ನನ್ನ ಪಕ್ಕದ ರೂಮಿನ ಪ್ರಭಂಜುನತ್ರ ನಾನ್ ಹೋಗುವ ವಿಷಯ ಹೇಳಿದೆ. ಅವನಾದ್ರೂ ಮಳೆ ಅಲ್ವಾ ಮಾರಾಯ ಯಾರ್ ಹೋಗ್ತಾರೆ ಅಂತೆಲ್ಲಾ ಹೆಳಿದಾಗ ನನಗೂ ಒಮ್ಮೆ ಹೌದು ಅಂತ ಅನಿಸಿತು. ಆದ್ರೆ ಕೋಡ್ಲೆ ನಾನ್ ಹೋಗುದು ನನ್ಗೋಸ್ಕರ ಏನಾದ್ರಾಗ್ಲಿ ನಾನ್ ಹೋಗುದೆ ಅಂತ ಡಿಸೈಡ್ ಮಾಡಿದೆ. ಅಷ್ಟರಲ್ಲಿ ನಾನ್ ಪ್ರಭಂಜು ಹತ್ರ ಹಾಗೆ ಹೆಳಿದ್ದು ಅವನಿಗೆ ಏನ್ ಇನ್ಪಿರೇಶನ್ ಸಿಕ್ಕಿತ್ತೋ ಏನೋ ಪ್ರಭಂಜು ಮತ್ತು ಅವನ ರೂಮಿನ ಕೆಂಪ ಮತ್ತು ಕೃಷ್ಣ ನಾವು ಬತರ್ೆವೆ ಅಂದ್ರು. ಸರಿ ಅಂತ ಹೇಳಿ ಹೊರಟೆವು ಪ್ರಭಂಜು ಅವನ ಕೆಮರಾ ಕೂಡ ತಗೊಂಡ. ಒಬ್ಬೊಬ್ರದ್ದು ಒಂದೊಂದು ಡಿಸೈನ್ ಟಿ ಶಟರ್್, ಜಾಕೆಟು ಪೋಶ್ ಅಂದ್ರೆ ಫೋಶ್, ಅದ್ರಲ್ಲೂ ಪ್ರಭಂಜು ಮತ್ತೆ ಕೃಷ್ಣ ಫುಲ್ ಮಿಂಚಿಂಗ್!!! ಹಾಗೆ ಕೃಷ್ಣನ ಬೈಕ್ನಲ್ಲಿ ಅವನು ಮತ್ತು ಕೆಂಪ, ನನ್ನ ಬೈಕ್ನಲ್ಲಿ ನಾನು ಮತ್ತು ಪ್ರಭಂಜು ಹೊರಟೆವು ಮಳೆ ಕೂಡ ಇಲರ್ಿಲ್ಲ ಹಾಗಾಗಿ ಬೈಕ್ನಲ್ಲಿ ಹೋಗುವಾಗ ಫೋಟೊ ತೆಗಿತಾ ಗಮ್ಮತಾಗಿ ನಮ್ಮ ಪ್ರಯಾಣ ಸಾಗಿತು. ಅಷ್ಟರಲ್ಲಿ ಪ್ರಭಂಜುಗೆ ರೈಡ್ ಮಾಡ್ಬೆಕು ಅಂತ ಅನ್ಸಿತ್ತು. ಆಯ್ತು ಮಾರಾಯ ಅಂದೆ. ನನಗೂ ಅದೇ ಬೆಕಾಗಿತ್ತು ಯಾವಾಗ್ಲೂ ನಾನೇ ರೈಡ್ ಮಾಡಿ ಬೇಜಾರಾಗಿತ್ತು! ಹಾಗೆ ನಾನ್ ಹಿಂದೆ ಅವನು ಮುಂದೆ. ನಾನು ಹಿಂದೆ ಬತರ್ಿದ್ದ ಕೃಷ್ಣನವರ ಫೋಟೆ ತೆಗ್ದೆ, ಮುಂಚೆ ಪ್ರಭಂಜು ತೆಗ್ದಾಗಿತ್ತು ಆದೂ ನಾನ್ ಮತ್ತೆ ಕೆಲವ್ ಫೋಟೊ ತೆಗ್ದೆ. ಅವರದ್ದು ಬೈಕ್ನಲ್ಲೇ ಭಾರಿ ಪೋಸ್ಗಳು, ಅವರು ನಮ್ಮ ಫೋಟೊ ತೆಗಿತಿದ್ರು ನಾವ್ ಏನ್ ಕಮ್ಮಿ ನಮ್ದೂ ಬೇರೆ ಬೇರೆ ಸೈಲ್ನ ಪೋಸ್ಗಳು! ಹೀಗೆ ಮುಂದೆ ಕಾರಿಂಜೆಗೆ ಹತ್ರ ಬಂದೆವು ಅಂತ ಆಗುವಾಗ ಮಳೆ ಸುರಾಯ್ತು. ಒಂದ್ ಕಡೆ ನಿಂತೆವು ಕೆಮರಾ ಎಲ್ಲಾ ಬ್ಯಾಗಲ್ಲಿ ಇಟ್ಟಾಗ ಮಳೆ ಕಮ್ಮಿ ಆಯ್ತು ಮತ್ತೆ ನಮ್ಮ ಜನರ್ಿ ಸ್ಟಾಟರ್್. ಆದ್ರೆ ಮತ್ತೆ ಮಳೆ ಬಂತು, ಆದ್ರೂ ಸಿದಾ ಹೋದೆವು ಕೆಂಪ ಕೃಷ್ಣನ ಬೈಕ್ ರೈಡ್ ಮಾಡ್ತಿದ್ದ ಅವನಂತೂ ಪೂತರ್ಿ ಒದ್ದೆ. ಜಾಕೆಟ್ ಕೂಡ ಇಲರ್ಿಲ ಪಾಪ ಕಂದ!! ಅಂತೂ ಕಾರಿಂಜೆ ಟನರ್್ ಬರ್ಬೇಕಾದ್ರೆ ಮಳೆ ನಿಂತು ಸೊಲ್ಪ ಬಿಸಿಲು ಸ್ಟಾಟರ್್ ಆಯ್ತು, ಹಾಗೆ ಒಂದು 4 ಕಿ.ಮೀ ಹೋದೆವು ಅಷ್ಟಕ್ಕೆ ಕಾರಿಂಜೇಶ್ವರ ಬೆಟ್ಟ ಬಂತು. ಬೈಕ್ ಪಾಕರ್್ ಮಾಡಿ ಕೆಮರಾ ಹಿಡ್ಕೊಂದು ಫೋಟೊ ತೆಗಿತಾ ಮೇಲೆ ಹತ್ಲಿಕ್ಕೆ ಸುರು ಮಾಡಿದೆವು ಸುಮಾರು 600 ಮೆಟ್ಲು ಇರ್ಬಹುದು. (ಅದು ಆಮೆಲೆ ಗೊತ್ತಾಗಿದ್ದು ನಂಗೆ ಬಿಡಿ.) ಕೆಂಪ, ಪ್ರಭಂಜು, ಕೃಷ್ಣ ಅಂತೂ ಫುಲ್ ಖುಷ್, ನಾನೂ ಕಾಡಾ! ಅಯ್ಯೋ ಅವರದ್ದು ಬೇರೆ ಬೇರೆ ಪೋಸು, ಬೇರೆ ಬೇರೆ ಡೈಲಾಗ್ಸು, ಜೋಕ್ಸು, ಅವರ್ ಅಷ್ಟೆಲ್ಲಾ ಮಾಡುವಾಗ ನಾನು ಸುಮ್ಮನಿಲರ್ಿಕ್ಕೆ ಆಕ್ತದಾ ಹೇಳಿ? ರೆಪ್ಯುಟೇಶನ್ ಮಾರ್ರೆ! ನನ್ನದೂ ಜೋಕ್ಸ್, ಪೋಸ್ ಎಲ್ಲಾ ಆಯ್ತು. ಹೀಗೆ ಸ್ವಲ್ಪ ಹತ್ತಿದಾಗ ಒಂದು ಬಂಡೆ ಕೆಳಗಿಂದ ನೀರು ಬತ್ರರ್ಿತ್ತು ಏನ್ ಚಂದ ಆಹಾ! ಅಲ್ಲಿ ಕೆಲವ್ ಫೋಟೊ ಕ್ಲಿಕ್ಕಿಸಿ ಮುಂದೆ ಹತ್ತಿದೆವು. ಆಗ ಶಂಕರಾಚಾರ್ಯರು ಕಟ್ಟಿಸಿದ ದೇವಸ್ಥಾನ ಸಿಕ್ಕಿತು ಅಲ್ಲಿಗೆ ಮತ್ತೆ ಹೋಗುದು ಅಂತ ಮುಂದೆ ಹೋದೆವು ಆಗ ಒಂದು ದೊಟ್ಟ ಎಂಟ್ರೆನ್ಸ್ ಸಿಕ್ಕಿತು, ಅದೇ ದೇವಸ್ತಾನ ಅಂದ್ಕೊಂಡು ಒಮ್ಮೆ ಭಾರಿ ಖುಷಿ ಆಯ್ತು. ಆದ್ರೆ ಅಲ್ಲಿ ನೋಡಿದ್ರೆ ಅಲ್ಲಿಂದ ಮತ್ತೆ 200 ಮೆಟ್ಲು ಹತ್ಬೇಕಿತು.್ತ ಶಿವ ಶಿವಾ!ಆದ್ರೂ ಪರ್ವಾಗಿಲ್ಲ ಮಾರ್ರೆ ಮುಂದೆ ಹೋಗಿ ದೇವಸ್ಥಾನ ತಲುಪಿತು ದೇವಸ್ಥಾನದ ಒಳಗೆ ಹೋಗಿ ಭಕ್ತಿಯಿಂದ ದೇವರಿಗೆ ನಮಸ್ಕಾರ ಮಾಡಿದೆವು. ಆ ದೇವಸ್ಥಾನದ ಬಗ್ಗೆ ಒಂದ್ಚೂರು ಹೇಳ್ಳೇ ಬೇಕು. ಅದು ಬೆಟ್ಟದ ತುತ್ತ ತುದಿಯಲ್ಲಿ ಪ್ರಶಾಂತ ವಾತಾವರಣದಲ್ಲಿ ಕಂಗೊಳಿಸುತ್ತಿತ್ತು. ಆಧುನೀಕತೆಯ ಯಾವ ಜಂಜಾಟವು ಇಲ್ಲದ ಸಂಪೂರ್ಣ ರಮಣೀಯ, ಅಧ್ಬುತ ದೇವಾಲಯ ಅದು. ಎಲ್ಲರೂ ಒಮ್ಮೆ ಹೋಗಲೇ ಬೇಕಾದ ಸ್ಥಳ. ಅಲ್ಲಿ ನಮ್ಮ ಫೊಟೊಗ್ರಫಿ ಶುರು ಮಾಡಿದೆವು ಅದು ಏನ್ ಎತ್ತರ ! ಏನ್ ಚಂದ ! ಒಂದು ಕಡೆಯಿಂದ ಕಾಡು, ಇನ್ನೊಂದು ಕಡೆಯಿಂದ ಊರು, ಆಗಷ್ಟೇ ಉಳುಮೆ ಮಾಡಿದ ಗದ್ದೆಗಳು ಚಿತ್ರ ಬಿಡಿಸಿದ ಹಾಗೆ ಕಾಣ್ತಿತ್ತು. ಹಾಗೇ ದೇವಸ್ಥಾನದಿಂದ ಹೊರಗೆ ಬಂದು ಅಲ್ಲೇ ಇರುವ ಚಂದದ ಸಣ್ಣ ಕೆಗೆದ್ದು ಫೊಟೊ ತೆಗ್ದು ಅದ್ರ ಬಗ್ಗೆ ಮತ್ತು ಆ ದೇವಸ್ಥಾನದ ಹಿನ್ನಲೆ ಬಗ್ಗೆ ಪ್ರಭಂಜು ಬಟ್ರಲ್ಲಿ ಮಾಹಿತಿ ಪಡೆದುಕೊಂಡ. ನಂತರ ನಮ್ಮ ಕಣ್ಣಿಗೆ ಬಿದ್ದದ್ದು ಭೀಮನ ಹೆಬ್ಬೆಟ್ಟು ಗುರುತು ಅಂತ ಕರೆಯಲ್ಪಡುವ ಕೆರೆ. ನಮ್ಮ ಪ್ರಕೃತಿ ಏನು ಅದ್ಭುತ ಅಲ್ಲವಾ? ಆ ದೊಡ್ಡ ಬಂಡೆಯ ಮೇಲೆ ಇಷ್ಟು ಚಂದದ ಕೆರೆ, ಅದೂ ಸಹ ಯಾವತ್ತೂ ಬತ್ತದ ಕೆರೆ! ಅದನ್ನು ನೋಡಿದ್ರೆ ನಮ್ಮ ಕಲ್ಪನೆಗೆ ನಿಲುಕದ್ದು ತುಂಬಾ ಉಂಟು ಅಂತ ಗೊತ್ತಾಗ್ತದೆ. ಮುಂದೆ ನೋಡಿದೆವು ದೊಡ್ಡ ಪ್ರಪಾತದ ಹಾಗೆ ಕಾಣಿಸಿತು ನಮ್ಮ ಹುಡುಗರು ಬಿಡ್ತಾರಾ ಡೇಂಜರ್ ಎಲ್ಲಿರ್ತದಾ ಅಲ್ಲಿಗೆ ಮೊದ್ಲು ಓಡ್ತಾರೆ. ನಾನು ಹಾಗೇ ಆದ್ರೂ ಅವರಷ್ಟು ಅಲ್ಲ ಬಿಡಿ! ಆ ವಿಷಯದಲ್ಲಿ ನಂಗೆ ಸ್ವಲ್ಪ ಭಯ. ಜಾಸ್ತಿಯೇ! ಅಲ್ಲಿಗೆ ಹೋಗಿ ಕೆಳಗೆ ಬಗ್ಗಿದ್ರೆ ನಾವು ಬೈಕ್ ಪಾಕರ್್ ಮಾಡಿದ ಜಾಗದಲ್ಲಿ ಇರುವ ದೊಡ್ಡ ಕೆರೆ ಕಾಣ್ತಾ ಉಂಟು. ಕಾಲು ಜಾರಿದ್ರೆ ಯಮಲೋಕಕ್ಕೆ 2ಡೇ ನಿಮಿಷ ದಾರಿ. ಅಂತಹ ಜಾಗದಲ್ಲೂ ಎಲ್ಲರ ಪೋಸು. ಮೊದ್ಲೇ ನಂಗೆ ಅಂತಹ ಜಾಗ ಅಂದ್ರ ಭಯ ಅದ್ರಲ್ಲೂ ಅಲ್ಲಿಯ ಬಟ್ರು ಹೇಳಿದ್ರು ಹಿಂದೆ ಯಾರೋ ಬಿದ್ದು ಯಮ ಲೋಕದಲ್ಲಿ ರೆಸ್ಟ್ ಮಾಡ್ತಿದಾರೆ ಅಂತ! ಅದು ಗೊತ್ತಾದ್ ಮೇಲೆ ಮತ್ತೆ  ಹೇಳ್ಬೇಕಾ!ಆದ್ರು ಹೆಗೋ ಹೋಗಿ ಫೊಟೊ ಎಲ್ಲಾ ಆಯ್ತು ಅನ್ನಿ. ಅಬ್ಬ ಎನಿಸಿಕೊಂಡ್ರೆ ಭಯ ಆಕ್ತದೆ.!! ಮುಂದೆ ವಾಪಾಸ್ ಕೆಳಗೆ ಬಂದು ಕೆಳಗಿನ ದೇವಸ್ತಾನದ ಹತ್ತಿರ ಇರುವ ಒಂದು ಒಳ್ಳೆ ಬಂಡೆ ಮೇಲೆ ಕುತ್ಕೊಂಡೆವು ಅಲ್ಲಿಂದ ದೂರದ ಬಂಡೆಯಲ್ಲಿ ಸುಮಾರು ನವಿಲುಗಳು ಕಾಣ್ತಾ ಇದ್ದವು ಅದನ್ನು ನೋಡಿ ಅದರ ಬಗ್ಗೆ ಮಾತಾಡಿ, ಅಲ್ಲಿನ ಕಲ್ಲುಗಳನ್ನು ನೋಡಿ ಆಶ್ಚರ್ಯ ಪಟ್ಟುಕೊಂಡೆವು. ನಂತರ ಮೆಲ್ಲನೆ ದೇವಸ್ಥಾನಕ್ಕೆ ಬಂದೆವು ಅಲ್ಲಿ ಪ್ರದಕ್ಷಿಣೆ ಹಾಕಿ ಮನಸ್ಸಲ್ಲಿ ಇದ್ದದ್ದನ್ನು ಬೇಡಿ ಇನ್ನೇನು ಹೊರಡ್ಬೇಕು ಅಂತ ಹೇಳುವಾಗ ಬಟ್ರು ಮಂಗಳಾರತಿಗೆ ರಡಿ ಆಗಿದ್ರು. ಹಾಗೆ ಮಂಗಳಾರತಿಯ ಅದ್ಭುತ ದೃಷ್ಯವನ್ನು ಕಣ್ತುಂಬಿ, ತೀರ್ಥ ಪ್ರಸಾದ ತಕೊಂಡು ಅಲ್ಲಿಂದ ಹೊರಟೆವು. ಕೆಳಗೆ ಬಂದಾಗ ಸುಮಾರು 7.30 ಆಗಿತ್ತು, ಆದ್ರೂ ಬೆಳಕಿತ್ತು ಹಾಗೆ ಬೈಕ್ ಹಾಗೂ ಜನ ಎಕ್ಸ್ಚೇಂಜ್ ಮಾಡ್ಕೊಂಡೆವು. ಅರ್ಥ ಆಗ್ಲಿಲ್ವಾ!! ನಾನು ಮತ್ತು ಕೆಂಪ ಕೃಷ್ಣನ ಬೈಕ್ನಲ್ಲಿ, ಕೃಷ್ಣ ಮತ್ತು ಪ್ರಭಂಜು ನನ್ನ ಬೈಕ್ನಲ್ಲಿ ಹೀಗೆ ಎಕ್ಸ್ಚೇಂಜ್ ಮೇಳದೊಂದಿಗೆ ವಾಪಾಸ್ ಹೊರಟೆವು. ಹಾಗೆ ಅಲ್ಲಿಂದ ಕದ್ರಿ ಪಾಕರ್್ ಹತ್ರದ ಡಿಂಕಿ ಡೈನ್ ಹೊಟೇಲಿಗೆ ಹೋಗಿ ನಾನ್, ಐಸ್ಕ್ರೀಮ್ ಎಲ್ಲಾ ಬಂಜರ ತಿಂದು ರೂಮಿಗೆ ಬಂದೆವು. ಅಲ್ಲಿಗೆ ನಮ್ಮ ಟ್ರಿಪ್ ಎಂಡ್ ಆಗ್ಲಿಲ್ಲ ಮಾರೆ! ಒಂಚೂರ್ ಕೇನ್ಲೆ! ಅದ್ರ ಎಫೆಕ್ಟ್ ಇನ್ನು ಇತ್ತು! ಹೀಗೆ ರೂಮಿಗೆ ಬಂದು ನಮ್ಮ ನಮ್ಮ ಅನುಭವ ಎಲ್ಲಾ ಮಾತಾಡಿ ಆಯ್ತು. ಹಾಗೆ ಇಡೀ ಟ್ರಿಪ್ನಲ್ಲಿ ಮಳೆರಾಯ ಉಪದ್ರವ ಕೊಡದೇ ಇದ್ದದ್ದಕ್ಕೆ ಅವನಿಗೆ ಸಾಮೂಹಿಕ ಥ್ಯಾಂಕ್ಸ್ ಕೂಡಾ ಆಯ್ತು. ಹೀಗೆ ನಾವು ತೆಗ್ದ ಫೋಟೋಗಳನ್ನು ನೋಡ್ತಾ ಮಾತಾಡ್ತಾ ನಮ್ಮ ಟ್ರಿಪ್ ಗುಂಗು ರಾತ್ರಿ 2 ಗಂಟೆಗೆ ಮಲಗುವ ತನಕ ಹಾಗೇ ಇತ್ತು.!!!
ಕಡೇಯದಾಗಿ ನಾನು ನನ್ನ ಒಟ್ಟು ಅಭಿಪ್ರಾಯ ಹೇಳುದಾದ್ರೆ ಈ ಟ್ರಿಪ್ ಸಂಪೂರ್ಣ ಖುಷಿ ಕೊಟ್ಟಿತು. ನನಗೆ ತೃಷ್ತಿಯಾಗುವಷ್ಟು ಫೋಟೊ ಕ್ಲಿಕ್ಕಿಸಿದೆ, ಎಲ್ಲರೂ ಖುಷಿ ಪಟ್ರು, ಕೆಂಪ, ಪ್ರಭಂಜು, ಕೃಷ್ಣನ ಜೊತೆ ಮೊದಲನೇ ಸಲ ಹೋಗುದಾದ್ರೂ ಅವರೆಲ್ಲಾ ತುಂಬಾ ಫ್ರೆಂಡ್ಲಿಯಾಗಿ ಇದ್ರು. ಅವರೊಟ್ಟಿಗೆ ಇನ್ನು ಮುಂದೆ ಕೋಡಾ  ಟ್ರಿಪ್ ಹೋಗ್ಲಿಕ್ಕೆ ಚಾನ್ಸ್ ಸಿಕ್ಕಿದ್ರೆ ನಾನು ಖಂಡಿತ ರೆಡಿ. ಅಂತಹ ಟ್ರಿಪ್ಗಳಿಗೆ ಹೇಳಿ ಮಾಡಿಸಿದ ಗುಣ ಅವರೆಲ್ಲರದು. ಅವರಿಗೆ ತುಂಬಾನೇ ಥ್ಯಾಂಕ್ಸ್.ಒಟ್ಟಿನಲ್ಲಿ ಜೀವನದ ಅಮೂಲ್ಯ ಪುಟಗಳಲ್ಲಿ ಸೇರಿಸಬಹುದಾದ ಸುಂದರ ಅನುಭವ. 
                                                             ಇಂತಿ,
 ಕೆ.ನಾ.ಗೋರೆ





 ನಮ್ಮ ಪ್ರಯಾಣ
 ಮೇಲಿನ ಕೆರೆ
 ಭೀಮನ ಹೆಬ್ಬೆಟ್ಟು ಎಂದು ಕರೆಯಲ್ಪಡುವ ಕೊಳ







 ಬೆಟ್ಟದ ಕೆಳಗಿನ ಸುಂದರ ರಮಣೀಯ ಕೆರೆ






 ಶಂಕರಾಚಾರ್ಯರು ಕಟ್ಟಿಸಿದ ದೇವಾಲಯ


 ಬೆಟ್ಟದ ಮೇಲಿಂದ ಕಾಣುವ ಸೊಬಗು





 ಮರ ಚಿಗುರಿ ಸೊಂಪಾಗಿ ಬೆಳೆಗದ ಎಷ್ಟು ಸುಂದರವೋ... ಅದು ಸತ್ತ ಮೇಲೂ ಕಲಾ ರಸಿಕರಿಗದು ಸುಂದರವೇ!!!








 ತೆಳ್ಳನೆಯ ಪಾಚಿಕಟ್ಟಿದ ಕಲ್ಲಿನ ಮೇಲೆ ಮೋಡದ ಮರೆಯಿಂದ ಸೂರ್ಯನ ಕಿರಣ ಸೋಕಿದಾಗ! ಎಂತಹ ಸೋಜಿಗ ಅಲ್ಲವೇ!!







 ಕತ್ತಲು ಬೆಳಕಿನಾಟದಲ್ಲಿ ಕೆಮರಾದ ಕಣ್ಣೋಟ




ಮುಗಿಲೆತ್ತರವಾಗಿ ಬೆಳೆದ ಬಂಡೆಗಳಿಗೆ ಕಿರೀಟಪ್ರಾಯ ಈ ನವಿಲುಗಳ