(ಗೂಗಲ್ ಚಿತ್ರ )
ಈಚಿನ ದಿನಗಳಲ್ಲಿ ಕೃಷಿ, ಹೈನುಗಾರಿಕೆ ಚಟುವಟಿಕೆಗಳ ಜಂಜಾಟದಲ್ಲಿ ನನ್ನ ಹವ್ಯಾಸಗಳೆಲ್ಲವೂ ಧೂಳು ಹಿಡಿಯುವ ಹಂತ ತಲುಪಿದ್ದವು. ಕೃಷಿ ಕಾರ್ಯಗಳೇ ಹಾಗೆ ಮುಕ್ತಾಯವಿಲ್ಲದ ಮೆಗಾ ಸೀರಿಯಲ್ಗಳಂತೆ. ಒಂದು ಸಮಸ್ಯೆಯನ್ನು ನಿವಾರಿಸಿ ನಿಟ್ಟುಸಿರು ಬಿಡುವಾಗ ಇನ್ನೊಂದು ಕೂಗಿ ಕರೆಯುತ್ತದೆ. ಒಂದರ್ಥದಲ್ಲಿ ಕೃಷಿಕರ ಸಮಸ್ಯೆಗಳೆಂದರೆ ಸಮುದ್ರದಾಚೆ ತೀರ ಹುಡುಕಿದಂತೆ. ಹೀಗೆ ಒಂದು ದಿನ ಬೆಳಗ್ಗೆ ಎಂದಿನಂತೆ ಉಪಹಾರ ಮುಗಿಸಿ, ಕತ್ತಿಮಸೆದು, ಮೊಬೈಲ್ನಲ್ಲಿ ಹಾಡುಗಳನ್ನು ಆಲಿಸುತ್ತಾ ತೋಟಕ್ಕೆ ಹೋದವನು ಅಡಿಕೆ ಹೆಕ್ಕಿ, ಕೊಕ್ಕೊ ಕೊಯ್ದು, ದನಗಳಿಗೆ 2 ಕಟ್ಟ ಹುಲ್ಲು ಕತ್ತರಿಸಿ ಮನೆಗೆ ಮರಳಿದಾಗ ಮಧ್ಯಾಹ್ನ 1 ಗಂಟೆ. ಹೊಟ್ಟೆ ಸಣ್ಣ ಮಟ್ಟಿನಲ್ಲಿ ತಾಳ ಹಾಕಲು ಪ್ರಾರಂಭಿಸಿತ್ತು ಅಷ್ಟರಲ್ಲೇ 'ಊಟಕ್ಕೆ ತಯಾರಾಗಿದೆ ಬೇಗ ಸ್ನಾನ ಮಾಡಿ ಬಾ' ಎಂಬ ಅಮ್ಮನ ಕೂಗು ಕೇಳಿ ಹಸಿವು ಜೋರಾಗತೊಡಗಿತು. ಆ ಕೂಡಲೆ ಸ್ನಾನ ಮಾಡಿ ಮಧ್ಯಾಹ್ನದ ಭೋಜನ ಮುಗಿಸಿ ಟಿವಿ ಚಾನಲ್ ತಿರುಗಿಸುತ್ತಿದ್ದವನ ಕಣ್ಣುಗಳು ನಿದ್ರೆ ಬೇಕೆಂದು ಹಟ ಹಿಡಿದವು. ಆ ಹಟಕ್ಕೆ ಮಣಿದು ಸಣ್ಣಗಿನ ಒಂದು ನಿದ್ದೆ ಮಾಡಿ, ಎದ್ದವನೇ ಕಾಫಿ ಹೀರುತ್ತಾ ವೇಪರ್ ಕೈಗೆತ್ತಿಕೊಂಡು ಮೇಲಿಂದ ಮೇಲೆ ಗಮನಿಸುತ್ತಿದ್ದೆ. ಹೀಗೆಯೇ ಯಾವುದೋ ಒಂದು ಲೇಖನ ಓದುವುದರಲ್ಲಿ ಮಗ್ನನಾಗಿದ್ದ ನನಗೆ ಪರಿಚಿತ ಹಕ್ಕಿಯ ಧ್ವನಿಯೊಂದು ಆಗಾಗ ಅಡ್ಡಿಪಡಿಸುತ್ತಿತ್ತು. ಮನಸ್ಸು ಲೇಖನದಿಂದ ಪಕ್ಷಿಯ ಕೂಗಿನೆಡೆ ವಾಲ ತೊಡಗಿತು. ಥಟ್ಟನೆ ಹೊಳೆಯಿತು ಒಮ್ಮೆ ಕೆಮರಾದೊಂದಿಗೆ ಹೊರಗಡೆ ಸುತ್ತಾಡಿಬಂದರೆ ಹೇಗೆ! ಕೆಲಸದ ಜಂಜಾಟಗಳಿಂದ ಮುಕ್ತಿಸಿಕ್ಕ ಹಾಗೂ ಆಗುತ್ತದೆ, ಧೂಳು ಹಿಡಿದ ಹವ್ಯಾಸಕ್ಕೆ ಜೀವನೀಡಿದಂತೆಯೂ ಆಗುತ್ತದೆ ಎಂಬ ಆಲೋಚನೆ ಮನಸ್ಸಿನಲ್ಲಿ ಸುಳಿದಾಡಿದೊಡನೆ ತಡಮಾಡದೇ ಗಾಡ್ರೇಜ್ನಲ್ಲಿ ಭದ್ರವಾಗಿರಿಸಿದ್ದ ಕೆಮರಾ ಹೊರ ತೆಗೆದು ಟ್ರೈಪಾಡ್ ಇತಾದಿ ಅಗತ್ಯ ಉಪಕರಣಗಳೊಂದಿಗೆ ಹೊರಟೆ. ಎಂದಿನಂತೆ ಅಡುಗೆ ಮನೆಯಿಂದ ಅಮ್ಮನ ಡೈಲಾಗ್ ಅಶರೀರವಾಣಿಯಂತೆ ಕೇಳಿಬಂತು ಮತ್ತೆ ಸುರು ಮಾಡಿಡ್ಯಾ ಬೆಡದ ಕೆಲಸ ಉತ್ತರ ನೀಡಬೇಕಾದ ಅವಶ್ಯಕತೆ ಕಾಣಿಸಲಿಲ.್ಲ ಯಾಕಂದ್ರೆ ಅದು ಕೋಲು ಕೊಟ್ಟು ಪಟ್ಟು ತಿಂದ ಹಾಗೆ ಆಗುತ್ತದೆ ಎಂದು ಮೊದಲೇ ಗೊತ್ತಿದ್ದರಿಂದ ತೆಪ್ಪಗೆ ಮನೆ ಹಿಂದುಗಡೆ ಇರುವ ಕಾಡಿನೆಡೆಗೆ ನನ್ನಷ್ಟಕ್ಕೆ ಹೆಜ್ಜೆ ಹಾಕತೊಡಗಿದೆ. ಹೊರಗಡೆ ಬಿಸಿಲ ಛಳ ಮೈ ಸುಟುವಂತಿದ್ದರೆ ಆ ಕಾಡಿನೊಳಕ್ಕೆ ಕೊಕ್ಕೊಡನೆ ತಣ್ಣನೆಯ ಗಾಳಿ ನಯವಾಗಿ ಬೀಸುತ್ತಿತ್ತು. ಎಲ್ಲೆಲ್ಲೂ ಪ್ರಶಾಂತ ನಿಶ್ಯಬ್ದ, ಮನಸ್ಸಿಗೆ ಎಲ್ಲೂ ಸಿಗದ ಆನಂದವನ್ನು ನೀಡಿದ ಕಾಡಿನೆಡೆಗೆ ಒಂದು ರೀತಿಯ ಪೂಜ್ಯ ಭಾವ ಮೂಡಿತು. ಹೀಗೆ ಕಾಡಿನ ಮೋಹಕ ಸೌಂದರ್ಯವನ್ನು ಆನಂದಿಸುತ್ತಾ ಮುಂದೆ ಸಾಗಿದಂತೆ ಅನತಿ ದೂರದಲ್ಲಿ ಹಕ್ಕಿಯೊಂದು ಕೂಗುತ್ತಿರುವುದು ಕೇಳಿಸಿತು. ಶಬ್ದವೇದಿ ಬಾಣದಂತೆ ಆ ಕೂಗನ್ನೇ ಹಿಂಬಾಲಿಸುತ್ತಾ ಹೊರಟೆ ಹೀಗೆ ಒಂದಷ್ಟು ದೂರ ಸಾಗಿಡೊಡನೆ ಭವ್ಯವಾಗಿ ಬೆಳೆದುನಿಂತಿರುವ ನೆಲ್ಲಿ ಮರದ ಮೇಲೆ ಗಿಜಗ ಹಕ್ಕಿಯೊಂದು ಕುಳಿತು ಕೂಗುತ್ತಿತ್ತು. ಪಕ್ಕದಲ್ಲಿ ಅರೆ ನಿಮರ್ಾಣವಾದ ಗೂಡು ಕಾಣಿಸಿತು. ಅದು ಗೂಡು ಕಟ್ಟುವುದರಲ್ಲಿ ನಿರತವಾಗಿದ್ದು ಹೆಣ್ಣು ಹಕ್ಕಿಯನ್ನು ಆಕಷರ್ಿಸಲು ಕೂಗುತ್ತಿರುವುದು ಸ್ಪಷ್ಟವಾಯಿತು. ಕೂಡಲೇ ಮರೆಯಲ್ಲಿ ನಿಂತು ಅದನ್ನೇ ಗಮನಿಸತೊಡಗಿದೆ. ಫೋಟೊ ಕ್ಲಿಕ್ಕಿಸತೊಡಗಿದೆ. ಅದಂತೂ ಕೂಗುತ್ತಲೇ ಗೂಡು ನೇಯುವ ಕಾಯಕದಲ್ಲಿ ನಿರತವಾಗಿತ್ತು. ಅದನ್ನು ಸೂಕ್ಷವಾಗಿ ಗಮನಿಸಿದೆ ಒಂದೂ ಅರ್ಥವಾಗಲಿಲ್ಲ. ಅದು ಒಂದು ಹುಲ್ಲು ಕಡ್ಡಿಯನ್ನು ಯಾವರೀತಿ ನೇಯುತ್ತಿದೆ, ಅದರ ಸ್ಟ್ರಾಟಜಿ ಏನಿದೆ ಎಂದೇ ಅರ್ಥವಾಗಲಿಲ್ಲ. ನನಗೆ ಏಕೆ ಸಿವಿಲ್ ಇಂಜಿನೀಯರ್ಗಳಿಗೂ ಅರ್ಥವಾಗದ ವಿನ್ಯಾಸ ಶೈಲಿ ಅವುಗಳದ್ದು. ಹೀಗೆ ಎರಡನೇ ದಿನವೂ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಆ ಹಕ್ಕಿಯನ್ನೇ ಗಮನಿಸುವ ಕಾಯಕದಲ್ಲಿ ತೊಡಗಿದ್ದೆ. ಈ ಹವ್ಯಾಸವೇ ಹಾಗೆ ಎಲ್ಲಾ ಜಂಜಾಟಗಳನ್ನು ಮರೆಸಿ ತನ್ನತ್ತ ಸೆಳೆಯುತ್ತದೆ. ಹೀಗೆ ಮೂರನೇ ದಿನ ಇದರ ಕೂಗು ಕೇಳಿಸಿ ಹಕ್ಕಿಯೊಂದು ಪಕ್ಕದ ರೆಂಬೆಯಲ್ಲಿ ಕುಳಿತು ಗೂಡನ್ನೇ ವಿಕ್ಷಿಸುತ್ತಿತ್ತು. ಅದು ಹೆಣ್ಣು ಹಕ್ಕಿ ಎಂಬುದು ಸಿಸ್ಸಂಶಯವಾಗಿತ್ತು. ಈ ಗಂಡು ಹಕ್ಕಿಯಂತೂ ಅದನ್ನು ಇಂಪ್ರೆಸ್ ಮಾಡುವ ಉದ್ದೇಶದಿಂದ ಇದೋ ನೋಡು ಬಾಗಿಲನ್ನು ಹೀಗೆ ವಿನ್ಯಾಸಗೊಳಿಸಿದ್ದೇನೆ, ಒಳ ವಿನ್ಯಾಸ ಹೀಗಿದೆ, ಇಷ್ಟು ಸುಭದ್ರವಾಗಿದೆ ಎಂದು ವಿವರಿಸುವ ರೀತಿಯಲ್ಲಿ ತನ್ನದೇ ಭಾಷೆಯಲ್ಲಿ ಸಂಭಾಷಣೆ ನಡೆಸುತ್ತಿತ್ತು. ಆ ಹೆಣ್ಣುಹಕ್ಕಿಯೂ ಇದರೆಡೆಗೆ ಆಕಷರ್ಿತವಾಗಿರುವಂತೆ ಭಾಸವಾಯಿತು. ಆದರೆ ಒಮ್ಮೆ ಗೂಡು ನೋಡಿದ ಆ ಹಕ್ಕಿ ಸುಮ್ಮನೆ ಹಾರಿ ಹೋಯಿತು, ಅದರೊಂದಿಗೆ ಗಂಡೂ ಹಾರಿ ಹೊಯಿತು. ನನಗೇನೂ ಅರ್ಥವಾಗಲಿಲ್ಲ. ಕೆಲಹೊತ್ತು ಕಳೆಯಿತು ಆದರೂ ಅವುಗಳ ಪತ್ತೆ ಇಲ್ಲ. ಇರಲಿ ನಾಳೆ ನೋಡೊಣವೆಂದು ಮನೆಗೆ ಮರಳಿದೆ. ಮರುದಿನ ಆಸಕ್ತಿಯಿಂದ ಬೆಳಗ್ಗೆ 6 ಗಂಟೆಗೆ ಒಂದು ಬುತ್ತಿಯಲ್ಲಿ ತಿಂಡಿ, ಪ್ಲಾಸ್ಕ್ನಲ್ಲಿ ಕಾಫಿ, ಒಂದು ಬಾಟಲಿ ನೀರಿನ ಸಹಿತ ಮರದ ಬುಡಕ್ಕೆ ಹೋದವನೇ ಮಾಮೂಲಿಯಂತೆ ಮರೆಯಲ್ಲಿ ಕೂರು ವೀಕ್ಷಿಸತೊಡಗಿದೆ. ಆ ಹಕ್ಕಿಗಳು ಜೋಡಿಯಾಗಿರುವುದು ಖಚಿತವಾಯಿತು. ಅವುಗಳು ಎಷ್ಟು ಸಂಭ್ರಮಿಸಿದ್ದವೋ ಗೊತ್ತಿಲ್ಲ, ಆದರೆ ವಿಷಯ ತಿಳಿದು ಅದಕ್ಕಿಂತಲೂ ಹೆಚ್ಚಿನ ಸಂಭ್ರಮ ನನಗಾಗಿತ್ತು. ಹೀಗೆ ಮತ್ತೆರಡು ದಿನಗಳಲ್ಲಿ ಅವು ಗೂಡನ್ನು ಪ್ರತರ್ಿಯಾಗಿ ನಿಮರ್ಿಸಿದ್ದವು. ಅದು ಎಷ್ಟು ಸುಂದರವಾಗಿತ್ತೆಂದರೆ ಹೆಚ್ಚು ಹಕ್ಕಿ ಏಕೆ ಹೆಣ್ಣು ಹುಡುಗಿಯೇ ಆಕಷರ್ಿತಳಾಗುವಷ್ಟು ಚಿತ್ತಾರಮಯವಾಗಿತ್ತು. ಹಲವು ದಿನಗಳಿಂದ ಅವುಗಳ ಚಲನವಲನಗಳನ್ನು ಗಮನಿಸಿ ಫೊಟೊ ಕ್ಲಿಕ್ಕಿಸುತ್ತಿದ್ದ ನನ್ನನ್ನು ಅವು ಗಮನಿಸಿದ್ದವೋ ಏನೊ! ಕೆಲವೊಮ್ಮ ನನ್ನೆಡೆಗೆ ನೋಡಿ ಕೂಗುತ್ತಿದ್ದವು, ಅವು ನನ್ನೊಡನೆ ಏನೋ ಮಾತನಾಡುತ್ತಿರುವಂತೆ ಭಾಸವಾಗುತ್ತಿತ್ತು ಆದರೆ ಪ್ರತಿಕ್ರಿಯಿಸೋಣವೆಂದರೆ ಅವುಗಳ ಭಾಷೆ ನನಗೆಲ್ಲಿ ಅರ್ಥವಾಗುತ್ತೆ! ಬಹುಷಃ ಅವುಗಳಿಗೆ ನನ್ನಿಂದೇನೂ ತೊಂದರೆ ಇಲ್ಲ ಎಂದು ಮನವರಿಕೆಯಾಗಿರಬೇಕು. ಮತ್ತೆ ಹಲವು ದಿನಗಳ ಕಾಲ ದಿನಕ್ಕೊಮ್ಮೆ ಹೋಗಿ ನೋಡಿ ಬರುತ್ತಿದ್ದೆ. ಹೇಳಿಕೊಳ್ಳುವಂತಹ ವಿಶೇಷವೇನೂ ಇರಲಿಲ್ಲ. ಆದರೆ ಒಂದು ದಿನ ಹೆಣ್ಣು ಹಕ್ಕಿಯು ಗೂಡಿನಲ್ಲೇ ಕುಳಿತಿರುವುದನ್ನು ಕಂಡು ಬಹುಷಃ ಮೊಟ್ಟೆ ಇಟ್ಟಿರಬಹುದು ಎಂದು ಅಂದಾಜಿಸಿ ಪಕ್ಕದ ಮರ ಹತ್ತಿ ಗಮನಿಸಿದೆ. ಊಹೆ ನಿಜವಾಗಿತ್ತು. ಆ ಬಳಿಕ 4 ದಿನಗಳಿಗೊಮ್ಮೆ ಗೂಡನ್ನು ವೀಕ್ಷಿಸಲು ಹೋಗುತ್ತಿದ್ದೆ. ಏಕೆಂದರೆ ಮೊಟ್ಟೆಯೊಡೆದು ಮರಿ ಹೊರಬರಲು ಹಲವು ದಿನಗಳಿದ್ದುದರಿಂದ ಆ ನಡೆವೆ ಅಂತಹ ವಿಶೇಷತೆಗಳೇನು ಇರುವುದಿಲ್ಲ. ಅದಲ್ಲದೇ ಇಷ್ಟು ದಿನ ಬಾಕಿ ಉಳಿಸಿದ ನನ್ನ ಇತರ ಕೆಲಸಗಳನ್ನೂ ಪೂರೈಸಬೇಕಾಗಿತ್ತಲ್ಲ! ಹಾಗಾಗಿ ಇತರ ಕೆಲಸಗಳಲ್ಲಿ ಮಗ್ನನಾದೆ. ಮುಂದೆ ಒಂದು ದಿನ ಮಧ್ಯಾಹ್ನದ ಸಮಯದಲ್ಲಿ ಗೋಡು ಇರುವ ಕಡೆ ಹೋದಾಗ ಅದೇನೋ ಹಕ್ಕಿಗಳೆರಡೂ ಮರದ ಹಿಂಬದಿತ್ತ ನೋಡಿ ವಿಚಿತ್ರವಾಗಿ ಕೂಗುತ್ತಿದ್ದವು. ಈಚಿನ ಹಲವು ದಿನಗಳಿಂದ ಅವುಗಳ ಒಡನಾಟದಲ್ಲಿ ಇದ್ದುದರಿಂದ ಸಾಮಾನ್ಯಮಟ್ಟಿಗೆ ಅವುಗಳ ವರ್ತತೆಯನ್ನು ಅಥರ್ೈಸಿಕೊಂಡಿದ್ದೆ. ಹಾಗಾಗಿ ಇಂದಿನ ಅವುಗಳ ವರ್ತನೆ ವಿಚಿತ್ರವಾಗಿದೆ ಎಂಬುದಂತೂ ಸ್ಪಷ್ಟವಾಗಿತ್ತು. ಹಕ್ಕಿಗಳು ಅಪಾಯದ ಲಕ್ಷಣಗಳು ಕಂಡಲ್ಲಿ ಮಾತ್ರ ಈ ರೀತಿಯಾಗಿ ಕೂಗುತ್ತವೆ ಎಂಬುದನ್ನು ನೋಡಿ ತಿಳಿದಿದ್ದರಿಂದ ತಕ್ಷಣ ನನ್ನ ಕೈಯಲ್ಲಿದ್ದ ಕೆಮರಾ, ಟ್ರೈಪಾಡ್ ಎಲ್ಲವನ್ನೂ ಅಲ್ಲೇ ಇಟ್ಟು ಕತ್ತಿಯನ್ನು ಕೈಯಲ್ಲಿ ಹಿಡಿದು ಮರದ ಹಿಂಬದಿಗೆ ಹೋಗಿ ನೋಡಿದೆ. ಅಬ್ಬ ನಾನು ಅವುಗಳಿಗಿಂತ ಹೆಚ್ಚಿಗೆ ಭಯಪಟ್ಟಿದ್ದೆ! ಅವುಗಳಾದರೂ ಭಯದಿಂದ ಚೀರುತ್ತಿದ್ದವು, ನನ್ನ ಪರೀಸ್ಥಿತಿ ಹೇಗಿತ್ತೆಂದರೆ ತಲೆಯೇ ಸ್ತಬ್ಧವಾಗಿತ್ತು, ಹೃದಯ ಬಡಿತ ಸ್ಕೆತಸ್ಕೋಪ್ ಇಲ್ಲದೆಯೇ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಯಾಕೆಂದರೆ ಅಲ್ಲಿ ಸಾಧಾರಣ ಗಾತ್ರದ ಹೆಬ್ಬಾವೊಂದು ಮರ ಹತ್ತುತ್ತಿತ್ತು. ಮೊದಲೇ ಹಾವುಗಳೆಂದ ಭಯಂಕರ ಹೆದರಿಕೆ ಹೊಂದಿದ ನಾನು ಅಲ್ಲಿಯೇ ನಿಂತಿದ್ದರೆ ಹಾಟರ್್ಫೈಲ್ ಆಗುವುದಂತೂ ಖಂಡಿತ ಎಂದು ಅಲ್ಲಿಂದ ದೂರ ಸರಿದೆ. ಆದರೆ ಆ ತಕ್ಷಣ ನನ್ನ ಗಮನ ಆ ಹಕ್ಕಿಗಳೆಡೆ ವಾಲಿತು, ಅವುಗಳು ನನ್ನನ್ನೇ ನೋಡಿ ಮತ್ತೂ ಜೋರಾಗಿ ಚೀರುತ್ತಿದ್ದವು, ಅವು ಮೂಕಪ್ರಾಣಿಗಳಾಗಿದ್ದರೂ ತಮ್ಮದೇ ರೀತಿಯಲ್ಲಿ ಸಹಾಯಕ್ಕಾಗಿ ಅಂಗಲಾಚುತ್ತಿದ್ದವು. ಅವುಗಳೊಡನೆ ಈಗಾಗಲೇ ಅನ್ಯೋನ್ಯತೆ ಬೆಳೆದಿದ್ದುದರಿಂದಲೋ ಏನೋ ಅವು ನನ್ನಲ್ಲಿ ಅತ್ಯಂತ ಭರವಸೆಯನ್ನಿಟ್ಟು ಈ ರೀತಿ ಅಂಗಲಾಚುತ್ತಿವೆ ಎಂದೆನಿಸಿತು. ಅವು ಒಮ್ಮೆ ನನ್ನೆಡೆಗೆ ನೋಡಿ ಚೀರುತ್ತಿದ್ದರೆ ಮತ್ತೊಮ್ಮೆ ಆ ಹಾವಿನೆಡೆಗೆ ನೋಡಿ ಚೀರುತ್ತಿದ್ದವು. ಅಷ್ಟರಲ್ಲೇ ಆ ಹಾವು ಗೂಡಿಗೆ ಸಮೀಪವಾಗಿತ್ತು. ಖಂಡಿತವಾಗಿ ಆ ಮೊಟ್ಟೆಗಳನ್ನು ತಿಂದು ಹಕ್ಕಿಗಳ ಸುಖ ಸಂಸಾರಕ್ಕೆ ಕೊಳ್ಳಿಯಿಡುವ ಅದರೊಂದಿಗೆ ನನ್ನ ನಿರೀಕ್ಷೆಗಳಿಗೂ ನೀರೆರೆಯುವ ಧಾವಂತದಲ್ಲಿ ಮುನ್ನುಗ್ಗುತ್ತಿತ್ತು.ಹಕ್ಕಿಯು ಗೂಡು ಹೆಣೆಯಲು ಪ್ರಾರಂಭಿಸಿದಂದಿನಿಂದ ಅವುಗಳನ್ನೇ ಗಮನಿಸುತ್ತಾ ಅವುಗಳ ಚೇಷ್ಟೆ, ಚಾಕಚಕ್ಯತೆ, ಸರಸ ಸಲ್ಲಾಪ ಇತ್ಯಾದಿಗಳ ಫೋಟೊ ತೆಗೆಯುತ್ತಾ ಇದ್ದ ನನಗೆ ಹಕ್ಕಿ ಮೊಟ್ಟೆ ಇಟ್ಟಿರುವುದನ್ನು ಕಂಡು ಆಗಿರುವ ಸಂತೋಷ ಹಕ್ಕಿಗಳಿಗೂ ಅರ್ಥವಾಗುವಂತಿತ್ತು. ಅವುಗಳಂತೆಯೇ ನಾನೂ ಮುಂದೆ ಹುಟ್ಟಲಿರುವ ಆ ಪುಟ್ಟ ಮರಿಗಳಿಗಾಗಿ ಕಾತರತೆಯಿಂದ ಕಾಯುತ್ತಿದ್ದೆ. ಈಗ ಈ ದರಿದ್ರ ಹಾವು ಆ ಮೊಟ್ಟೆಗಳನ್ನು ತಿಂದರೆ ನಮ್ಮ ಗತಿ! ಆ ನನ್ನ ಭಯಭೀತ ಮನಸ್ಸಿನೊಳಕ್ಕೆ ಹೀಗೊಂದು ದೂರಾಲೋಚನೆ ಥಟ್ಟನೆ ಹಾದು ಹೋಯಿತು. ಅಯ್ಯೋ! ಹೀಗಾಗಲು ಬಿಡಬಾರದು ಆ ಹಕ್ಕಿಗಳಿಗೆ ಈಗ ನಾನೇ ಆಸರೆ ಎಂದು ನಿರ್ಧರಿಸಿದವನೇ ನಾನು ತಂದಿದ್ದ ಕೋಲನ್ನು ತೆಗೆದು ಆ ಹಾವನ್ನು ಕೆಳಗೆ ಬೀಳಿಸಲು ಮುಂದಾದೆ.ತಕ್ಷಣ ನನ್ನ ಮುಂದೆ ನನ್ನದೇ ಪ್ರತಿರೂಪ ಪ್ರತ್ಯಕ್ಷವಾಗಿ ಏನು ಮಾಡುತ್ತಿದ್ದಿ ಮಾರಾಯ! ನಿನಗೆ ಹುಚ್ಚಾ! ಎಂದು ಉದ್ಗರಿಸಿ ಮಾಯವಾದಂತೆ ಭಾಸವಾಯಿತು. ಭ್ರಮಾಲೋಕದಿಂದ ಹೊರಬಂದ ಅನುಭವವಾಯಿತು. ಆ ಹಕ್ಕಿಗಳ ಚೀರಾಟ, ಅವುಗಳನ್ನು ರಕ್ಷಿಸಬೇಕೆಂಬ ತಲ್ಲಣ ಎಲ್ಲವೂ ಮರೆಯಾಯಿತು. ನಿಲರ್ಿಪ್ತ ಭಾವದಿಂದ ಮನಸ್ಸು ಸರಿ ತಪ್ಪುಗಳ ಹುಡುಕಾಟದಲ್ಲಿ ತಲ್ಲಿನವಾಯಿತು. ಹೌದು ನಾನು ಮಾಡುತ್ತಿರುವುದಾದರೂ ಏನು? ಸಹಾಯವೇ? ಹಾಗಾದರೆ ಯಾರಿಗೆ ಸಹಾಯ? ಅಥವಾ ಅಪಕಾರವೇ ಹಾಗಾದರೆ ಅದಾದರೂ ಯಾರಿಗೆ? ಇಲ್ಲಿ ಒಬ್ಬರಿಗೆ ಉಪಕಾರವಾದರೆ ಅದೇ ಇನ್ನೊಬ್ಬರಿಗೆ ಅಪಕಾರ. ಒಂದೆಡೆ ಸಹಾಯಕ್ಕಾಗಿ ಕೃತಜ್ಞತಾ ಭಾವವಾದರೆ ಇನ್ನೊಂದೆಡೆ ಅಪಕಾರಕ್ಕಾಗಿ ಶಾಪದ ಭಾವ. ಹೀಗಿರುವಾಗ ಪ್ರಕೃತಿಯ ನಿಯಮವನ್ನು ಉಲ್ಲಂಘಿಸಲು ನಾನು ಯಾರು?ಒಂದು ಪ್ರಶ್ನೆಗೆ ಉತ್ತರ ಹುಡುಕಲು ಮನಸ್ಸು ಅಲೆಮಾರಿಯಾಗಿ ಸುತ್ತುತ್ತಿರುವಾಗ ಇನ್ನೊಂದು ಪ್ರಶ್ನೆ? ಮತ್ತೊಂದು ಪ್ರಶ್ನೆ? ಮಗದೊಂದು ಪ್ರಶ್ನೆ? ಮನಸ್ಸಿನಲ್ಲಿ ಮೂಡುತ್ತಿದ್ದವು. ಈ ಕುಡುಕಾಟದ ಒತ್ತಡದಲ್ಲಿ ಮೈ ಬೆವರತೊಡಗಿತು. ಒಮ್ಮೆಲೆ ನಿದ್ದೆಯಿಂದ ಎದ್ದಂತೆ ಭಾಸವಾಯಿತು. ಕೂಡಲೇ ವಾಸ್ತವ ಗೋಚರಕ್ಕೆ ಬಂತು. ಅಷ್ಟಾಗಲೇ ಆ ಹಾವು ಎಲ್ಲಾ ಮೊಟ್ಟೆಗಳನ್ನು ತಿಂದು ಮೆಲ್ಲನೆ ಕೆಳಗಿಳಿಯುತ್ತಾ ನನ್ನತ್ತ ನೋಡುತ್ತಿತ್ತು. ಅದರ ಆಹಾರವನ್ನು ಕಸಿದುಕೊಳ್ಳದೇ ಉಪಕಾರ! ಮಾಡಿದ ಧನ್ಯತಾಭಾವಕ್ಕೊ? ಉತ್ತರವಿಲ್ಲದ ಪ್ರಶ್ನೆ!. ಇತ್ತ ಹಕ್ಕಿಗಳು ದುಖಃದ ಮಡುವಿನಲ್ಲಿ ಹೊರಳಾಡುತ್ತಾ. . . ಕಣ್ಣೀರಿಡುತ್ತಾ ನನ್ನತ್ತ ನೋಡಿ ಛೇ! ಎಂತಹ ನೀಚ ಜನ್ಮ ಈತನದ್ದು, ಇಷ್ಟೊಂದು ದಿನ ಭಾವನಾತ್ಮಕವಾಗಿ ಆತ್ಮೀಯತೆಯನ್ನು ತೋರಿ ಇದೀಗ ಇಂತಹ ಜೀವಸ್ಮರಣ ಹೋರಾಟದಲ್ಲಿ ಈ ರೀತಿಯಾಗಿ ನಮಗೆ ಮೋಸ ಮಾಡಿದನಲ್ಲಾ, ಇವನ ಪಾಪ ನೂರು ಜನ್ಮಕ್ಕೂ ನಿವಾರಣೆಯಾಗಲಾರದು ಎಂದು ತುಚ್ಛಭಾವದಿಂದ ಥೂ. . . ಎಂದು ಉಗಿದಂತಾಯಿತು.ಅಷ್ಟರಲ್ಲೇ ಕಣ್ಣೀರು, ದುಖಃ ಸಂಪೂರ್ಣವಾಗಿ ನನ್ನ ನಿಯಂತ್ರಣಮುಕ್ತವಾದವು. ಅದೆಷ್ಟು ಅತ್ತಿದ್ದೇನೋ ಸಾಕೆಂದರೂ ಕಣ್ಣೀರು ನಿಲ್ಲಲಿಲ್ಲ, ಛೇ ನಾನು ಇವತ್ತೇ ಇತ್ತ ಬರಬೇಕಿತ್ತೇ? ನಿನ್ನೆ ಬಂದಿದ್ದರೆ ಈ ಹೃದಯ ವಿದ್ರಾವಕ ಘಟನೆಯನ್ನು ನೋಡುವ ಅನಿವಾರ್ಯತೆ ಎದುರಾಗುತ್ತಿರಲಿಲ್ಲವಲ್ಲ? ಅಥವಾ ನಾಳೆ ಬಂದಿದ್ದರೂ ಒಂದಷ್ಟು ಬೇಸರವಾಗುತ್ತಿತ್ತೇ ವಿನಹ ಸಂದಿಗ್ಧ ಪರೀಸ್ಥಿತಿಗೆ ಬಲಿಪಶುವಾಗಬೇಕಾಗಿರಲಿಲ್ಲ ಎನಿಸಿತು.ಆ ಹಕ್ಕಿಗಳು ನನ್ನನ್ನು ತಮ್ಮ ಕುಟುಂಬದ ಭಾಗವಾಗಿ ಪರಿಗಣಿಸಿದ್ದವು, ನಮ್ಮ ಜಾತಿ ಬೇರಾದರೂ ವಿಚಿತ್ರವಾದ ಅನ್ಯೋನ್ಯತೆ ಬೆಳೆದಿತ್ತು. ಹಾಗಾಗಿ ಆ ಅನ್ಯೋನ್ಯತೆಗೆ ಬೆಲೆ ಕೊಟ್ಟಾದರೂ ಅವುಗಳನ್ನು ರಕ್ಷಿಸಬೇಕಿತ್ತೇ? ಹಾಗಾದರೆ ನಾನು ಮಾಡಿದ್ದು ತಪ್ಪೇ? ಅಥವಾ ಪ್ರಕೃತಿಧರ್ಮಕ್ಕೆ ಅಡ್ಡಿಪಡಿಸದೇ ಸುಮ್ಮನಿದ್ದುದೇ ಸರಿಯೇ?ಯಾವುದನ್ನು ಸಮಥರ್ಿಸಿಕೊಂಡರೂ ಇನ್ನೊಂದಕ್ಕೆ ಮೋಸ ಮಾಡಿದಂತೆಯೇ!ದ್ವಂದ್ವ. . .ಮನಸ್ಸೆಲ್ಲಾ ದ್ವಂದ್ವ. . . ಮತ್ತದೇ ದ್ವಂದ್ವ !
ಕೆ.ನಾ.ಗೋರೆ

