ಗುರುವಾರ, ಫೆಬ್ರವರಿ 6, 2014

ನಂಬಿಕೆ

ನಂಬಿಕೆ ಭಾವ ಬಂಧಗಳ ಹೊದಿಕೆ
ನಂಬಿಕೆಯಿಂದ ಮಧುರ ಸಂಬಂಧಗಳ ಉಳಿಕೆ
ಜಗದ ಸೂತ್ರವು ಈ ಪದವು

ನಾನವಳ ನಂಬಿಹೆನು...
ಆದರೀಗ ನಾನಿಟ್ಟ  ‌ಅವಳ ಮೇಲಿನ ನಂಬಿಕೆ
ಮುರಿದು ಬೀಳುವ ಲಕ್ಷಣ ತೋರುತಿಹುದೆನಗೆ
ಇದೆನ್ನ ಮನ‌ದ ಭಯವೊ?
ಪರಿಪೂಣ‌೯ ನಂಬಿಕೆಯ ಅಭಾವವೋ?

ಮನಸು ಮತ್ತೆ ಮತ್ತೆ ಹೇಳುತಿದೆ...
ಭಯವೇಕೆ...!ಭ್ರಾಂತಿ ಏಕೆ...!

ವಾಸ್ತವದ ಬುದ್ಧಿ ಉತ್ತರಿಸುತಿದೆ....
ನಂಬಬೇಕು... ಆದರೆ ಸಂಶಯಿಸಲೂ ಬೇಕು...!
ಪಯಾ‌೯ಯ  ಮಾಗ೯ವ ಹುಡುಕುತಿರಬೇಕು....

ನಂಬಿಕೆ ಮುರಿದ‌ರೆ  ಮನಸು ಮುರಿವುದು
ಸಂಶಯ ಇದ್ದರೆ ವಾಸ್ತವ ಅರಿವುದು
ನಂಬಿಕೆ ಸಂಶಯಗಳೆರಡು ಜತೆಯಾಗಿರಲು
ಎಲ್ಲವನು ಎದುರಿಸುವ ತಾಕತ್ತು ಬರುವುದು


ಕೆ.ನಾ.ಗೋರೆ