ಸೋಮವಾರ, ಜನವರಿ 27, 2014

ಪ್ರೀತಿಯ ಹುಡುಕಾಟ-ಪರದಾಟ


ಕೆ. ನಾ. ಗೋರೆ

ಎನ್ನ ಬಾಳ ಬೆಳಕು


ಅವಳೇಕೆ ಹಿಗಾಡುತಿಹಳು!? ಪ್ರಶ್ನೆಯೂ, ಗೊಂದಲವೂ!!!

ಮೊದಮೊದಲು ಹೆಚ್ಚಾಗಿ ಪ್ರಿತಿಸುತ್ತಿದ್ದವಳು ಅವಳು!
ಎನ್ನ ಬಿಟ್ಟು ಹೋಗದಿರು ನಲ್ಮೆಯ ಹುಡುಗನೇ, 
ನೀ ಬೇಕು ಎನಗೆ, ಎನ್ನ ಬಾಳಿಗೆ ಎನ್ನುತ್ತಿದ್ದಳು ಅವಳು
ಪ್ರೀತಿಯ ಮಾತುಗಳಿಂದ ಪ್ರೀತಿ ಸಾಗರದಿ ತೇಲುವಂತೆ ಮಾಡಿದವಳು ಅವಳೇ !?
ಬದುಕಬೇಕು ಎಂಬ ಪದಕೆ ಅರ್ಥ ನೀಡಿದವಳು ಅವಳೇನೆ...
ಅವಳ ಪ್ರೋತ್ಸಾಹದಿ ಬದುಕು ಸರಿದಾರಿಗೆ ಬರುತಿರಲು...
ಮೆಲ್ಲ ಮೆಲ್ಲನೆ ದುರಾಗ ಬಯಸುತಿಹಳಲ್ಲ! ಏಕೋ ! ಏನೋ !
ಪ್ರೀತಿಯ ಮಾತುಗಳಿಗೆ ಬರಗಾಲ ಬಂದಿಹುದು ! 
ಎನ್ನ ಪ್ರೀತಿಯ ಮಾತುಗಳೆಲ್ಲವೂ ಅವಳಿಗೆ ಇರಿಟೇಟಾಗುತಿಹುದು!
ಅವಳ ಪ್ರೀತಿ ಸಿಗದೇ ಬಾಳೆ ಮಂಕಾಗಿಹುದೆನ್ನ...
ಇಂತಹ ಬರಗಾಲದಲೂ ಸಿಟ್ಟು ಬೇಸರಗಳೆಲ್ಲ ಸಾಗರವಾಗಿ ಧುಮ್ಮಿಕ್ಕುತಿಹವಲ್ಲಾ!ಆದರೂ ಹತ್ತಿಕ್ಕುವೇನು ಆ ಪ್ರವಾಹವನ್ನು ಅವಳ ಪ್ರೀತಿಯ ಬಲದಿಂದ
ಅವಳ ತಿರಸ್ಕಾರವನು ಪುರಸ್ಕಾರವೆಂದು ತಿಳಿದು ಸಹಿಸುವೇನು ಎಲ್ಲವನು ಅವಳಿಗಾಗಿ !
ಅವಳ ತಿರಸ್ಕಾರದಿ ನೊಂದು ದೂರಾಗಲಾರೆನು ಎಂದೆಂದೂ...
ನನಗೆ ಗೊತ್ತು ನಾ ಬೇಕು ಅವಳಿಗೆ, ಅವಳ ಬಾಳಿಗೆ ರಕ್ಷೆಯ ಕವಚವಾಗಿ!
ಈ ಸತ್ಯವು ಅವಳಿಗರಿವಾಗಬಹು ಎಂದಾದರೊಂದು ದಿನ ಅವಳಿಗೆ...
ಇದೆನ್ನ ಬಾಳ ಕೊನೆ ಭರವಸೆಯು !

ಕೆ. ನಾ. ಗೋರೆ  

ಬುಧವಾರ, ಜನವರಿ 8, 2014

ದಿನಕರ ಮೊಗೇರ ಅವರ 'ಮೂಕ ಮನದ ಮಾತು' ಕಥಾ ಸಂಕಲನ ಪುಸ್ತಕ ರೂಪದಲ್ಲಿ ಮುದ್ರಣಗೊಂಡ ಅವರ ಬ್ಲಾಗ್ ಪ್ರಪಂಚದ ಕಥೆಗಳು


ಮೂಕ ಮನದ ಮಾತು ಕಥಾ ಪುಸ್ತಕದ ಬಗ್ಗೆ ಹೇಳುವುದಾದರೆ ಮೊದಲನೆಯದಾಗಿ ಹೇಳಲೇಬೇಕಾದ್ದು ಬರವಣಿಗೆಯ ಶೈಲಿ. ಒಂದು ಸಿನೆಮಾ ಹಿಟ್ ಆಗಬೇಕಾದಲ್ಲಿ ಹೇಗೆ ಹೀರೋ ಪಾತ್ರಧಾರಿ ಮುಖ್ಯವೋ ಕಥೆಯು ಅಷ್ಟೇ ಮುಖ್ಯ. ಅಂತೆಯೇ ಒಂದು ಕಥಾ ಪುಸ್ತಕ ಉತ್ತಮವಾಗಿ ಮೂಡಿಬರಬೇಕಾದರೆ ಕಥಾ ವಿವರಣೆಯ ಶೈಲಿಯೇ ಪ್ರಧಾನ ಪಾತ್ರಧಾರಿ. ಕಥಾ ವಸ್ತು ಎಷ್ಟು ನೀರಸವಾಗಿದ್ದರೂ ಅದನ್ನು ಸ್ವಾರಸ್ಯಕರವಾಗಿಸಬಲ್ಲ ತಾಕತ್ತು ಬರಹ ಶೈಲಿಗಿದೆ. ಇದನ್ನು ದಿನಕರ ಮೊಗೇರ ಅವರ ಬರವಣೆಗೆ ಶೈಲಿ ಸಾರಿ ಸಾರಿ ಹೇಳುತ್ತಿದೆ. ಮೂಕ ಮನದ ಮಾತು ಎಂದೊಡನೆ ನನಗೆ ಮೊದಲನೆಯದಾಗಿ ನೆನೆಪಿಗೆ ಬರುವುದೇ ಓದಿಸಿಕೊಂಡು ಹೋಗುವ, ಆಸಕ್ತಿಯನ್ನು ಇಮ್ಮಡಿಗೊಳಿಸುವ, ಪಾತ್ರದಲ್ಲಿ ವಿಲೀನರಾಗುವಂತೆ ಮಾಡುವ ಬರಹ ಶೈಲಿ!.

ಇನ್ನು ಪುಸ್ತಕದಲ್ಲಿ ಮೂಡಿಬಂದ ಕಥೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಹೇಳುವುದಾದರೆ ಪ್ರತಿಯೊಂದು ಕಥೆಯೂ ವಿಭಿನ್ನ-ಸಾಮಾನ್ಯ.! ಓದು ಪ್ರಾರಂಭಿಸಬೇಕಾದರೆ ಕಥೆ ಕಾಲ್ಪನಿಕವೆನಿಸಿದರೆ ಓದುತ್ತಾ ಓದುತ್ತಾ ಹೋದಂತೆ ಅರೆಕ್ಷಣ ಇದು ಲೇಖಕರ ಸ್ವಾನುಭವವೇ ಇರಬೇಕು! ಎಂದೆನಿಸಿದರೆ ಮರುಕ್ಷಣ ನಮ್ಮ ಬಾಳಲ್ಲಿ ಎಂದಾದರೂ ನಡೆದ ಘಟನೆಯೇ ಎಂದು ಮನಸ್ಸು ಇತಿಹಾಸದಲ್ಲಿ ಹುಡುಕ ಹೊರಡುತ್ತದೆ. ನಮ್ಮನ್ನೇ ನಾವು ಪ್ರಶ್ನಿಸತೊಡಗುತ್ತೇವೆ. ಒಂದು ರೀತಿಯಲ್ಲಿ ಅಬ್ ನಾರ್ಮಲ್ ಸೈಕಾಲಜಿ ಅಧ್ಯಯನ ಮಾಡುವಾಗ ಮೂಡುವ ಭಾವನೆಗಳಂತೆ! ನಮಗೇ ಅರಿವಿಲ್ಲದಂತೆ ಕಥಾ ನಾಯಕ, ನಾಯಕಿಯರಾಗಿಬಿಡುತ್ತೇವೆ. ಕಥೆಗಳೆಲ್ಲವೂ ಸಣ್ಣವಾಗಿದ್ದರೂ ಓದಿದೊಡನೆ ಮುಂದೆ ಹೀಗಾಗಿರಬಹುದು, ಹಾಗಾಗಿರಬಹುದು ಇತ್ಯಾದಿ ಇತ್ಯಾದಿ... ಕಲ್ಪನೆಗಳೊಂದಿಗೆ ಮನಸ್ಸು ಕಥೆಯ ಮುಂದಿನ ಭಾಗವನ್ನು ರೂಪಿಸುತ್ತಾ ಹೋಗುತ್ತದೆ. ಪುಸ್ತಕದ ಮೊದಲ ಕಥೆ ಹೀಗೂ ಉಂಟೆ?  ಇದಕ್ಕೊಂದು ಉದಾಹರಣೆ ಕಥೆ ಬುದ್ಧಿ ಜೀವಿಗಳು ನಂಬಲು ಸಾಧ್ಯವಿಲ್ಲದ ಅ-ಸ್ವಾಭಾವಿಕ ಘಟನೆಗಳನ್ನು ಬಿಂಬಿಸುತ್ತಿದೆ ಎಂದೆನಿಸಿದರೂ ಓದಿದ ಮೇಲೆ ಆಗೊಮ್ಮೆ, ಈಗೊಮ್ಮೆ ಕಾರಿನಲ್ಲಿ ಒಂಟಿಯಾಗಿ ಪ್ರಯಾಣಿಸುವಾಗ ಕಥೆ ನೆನಪಾಗುವುದು ನಿಸ್ಸಂಶಯ. ಮರೆವೆನೆಂದರೂ ಮರೆಯಲಾಗದ ಒಂದು ಸುಂದರ ಕಥೆ ಇದು!

5ನೇ ಕಥೆ ಏನೋ ಮಾಡಲು ಹೋಗಿ ಇನ್ನೊಂದು ರೀತಿಯಲ್ಲಿ ವಿಭಿನ್ನತೆಯನ್ನು ಹೊಂದಿದೆ. ಓದುತ್ತಾ ಹೋದಂತೆ ಲಿಂಗ ಭೇದ ವಿಲ್ಲದೇ ಆ ಹುಡುಗಿಯ ಪಾತ್ರದಲ್ಲಿ ಲೀನರಾಗುವಂತೆ ಮಾಡುತ್ತದೆ. ಹುಡುಗರಿಗೆ ಕೆಲ ಕಾಲ ಹುಡುಗಿಯಾಗಿ ಬಾಳುವ ಅವಕಾಶ ನೀಡುವ ಕಥೆ! ಈ ಕಥೆ  ಈ ರೀತಿಯಾದರೆ ಈ ರೀತಿ!!! ಎಂಬ 7 ನೇ ಕಥೆ ಪ್ರತಿಯೊಬ್ಬರ ಜೀವನದಲ್ಲಿ ನಡೆದ, ನಡೆಯುವ, ನಡೆಯಬಹುದಾದ ಸಂಗತಿಗಳೆಡೆಗೆ ಬೆಳಕು ಚೆಲ್ಲುತ್ತದೆ. ಕೊನೇಯ ಸಾಲು 1 ಮೆಸೇಜ್ ರಿಸೀವ್ಡ್ ಎಂಬ ಪದ ಮುಂದಿನ ಕಥೆಯನ್ನು ಓದುಗರಿಗೆ ರೂಪಿಸಿಕೊಳ್ಳಲು ವೇದಿಕೆಯನ್ನು ಒದಗಿಸುತ್ತದೆ.

ಮನೆ ಊಟ ದೊರೆಯುತ್ತದೆ... ಎಂಬ 10ನೇ ಕಥೆ ಎಲ್ಲಾ ಕಥೆಗಳಿಗಿಂತಲೂ ಕೊಂಚ ಭಿನ್ನ. ಈ ಹಿಂದಿನ ಕಥೆಗಳು ನಮ್ಮನ್ನು ವಿನೂತನ ದಿಕ್ಕಿಗೆ ಕೊಂಡೊಯ್ದು ಯೋಚನಾ ಲಹರಿ, ಭಾವುಕತೆಯಲ್ಲಿ ಮಿಂದೇಳುವಂತೆ ಮಾಡಿದರೆ ಇದು ವಾಸ್ತವ ಹಾಸ್ಯ ಲೋಕಕ್ಕೆ ಎಳೆದೊಯ್ಯುತ್ತದೆ. ಮನೆ ಊಟದ ನಿಜವಾದ ಅರ್ಥವನ್ನು ಹಾಸ್ಯಮಯವಾಗಿ ವಿವರಿಸುವ ಚೊಕ್ಕ ಕಥೆ. ಬೇಗ ಓದಿ ನೋಡಿ! 11 ನೇ ಕಥೆ ಬದುಕು...... ಸಾಮಾಜಿಕವಾಗಿ, ನೈತಿಕವಾಗಿ (ಮುಖ್ಯವಾಗಿ ಆಂತರಿಕವಾಗಿ)ಪರಿಹಾರ ಕಂಡುಕೊಳ್ಳಲೇಬೇಕಾದ ಗಂಭೀರ ಸಮಸ್ಯೆಯ ಕಡೆಗೆ ಬೊಟ್ಟು ಮಾಡುತ್ತದೆ.

13 ನೇ ಕಥೆ ವಿಪಯರ್ಾಸ! ಮಾಧ್ಯಮ ಜಗತ್ತಿನ ಅಮಾನವೀಯತೆ, ವ್ಯಾಪಾರಿಕರಣಕ್ಕೆ ನಿದರ್ಶನ! ಹೆಚ್ಚೇನೂ ಹೇಳಲಾರೆ, ಓದಿ ನೋಡಿ!

16ನೇ ಕಥೆ ಮಾನವೀಯತೆ.......??? ಮುಗಿಯುವುದರೊಳಗಾಗಿ ಕಣ್ಣುಗಳು ತೇವಗೊಳ್ಳುತ್ತವೆ. ಮನಸ್ಸು, ಹೃದಯ, ಆತ್ಮಸಾಕ್ಷಿಗೆ ನಾಟುವಂತೆ ಅದ್ಬುತವಾಗಿ ವಣರ್ಿಸಲ್ಪಟ್ಟಿದೆ. ದಿನಕರ ಮೊಗೇರ ಅವರ ವರ್ಣನಾ ಕೌಶಲ್ಯವೇ ಇದಕ್ಕೆ ಕಾರಣ.

19ನೇ ಕಥೆ ದೇವರ ಆಟ.....!!!! ಭಯ, ಟೆನ್ಷನ್, ಗಾಬರಿ, ಬೇಸರ, ಸಂಕಟ ಎಲ್ಲವನ್ನು ಸರದಿಯಾಗಿ ಉಂಟಾಗುವಂತೆ ಮಾಡಿ ಕೊನೇಯಲ್ಲಿ ಒಂದೇ ಏಟಿನಲ್ಲಿ ಎಲ್ಲವನ್ನು ಅಂತ್ಯವಾಗಿಸಿ ನಿರಾಳ ಭಾವ ಮೂಡಿಸುವ ಹೃದಯಸ್ಪಶರ್ಿ ಕಥೆ.

ಕೊನೇಯದಾಗಿ ಒಂದನ್ನಷ್ಟೇ ಹೇಳಬಲ್ಲೆ, ಓದುವ ಹವ್ಯಾಸ ಬೆಳೆಸಿಕೊಳ್ಳಬೇಕೆಂಬ ಮನಸ್ಸುಗಳಿಗೆ ಈ ಪುಸ್ತಕ ಉತ್ತಮ ನಾಂದಿಯಾಗಬಲ್ಲದು. ದಿನಕರ ಮೊಗೇರ ಸರ್  ಮುಂದಿನ ದಿನಗಳಲ್ಲಿ ನಿಮ್ಮ ಪ್ರತಿಯೊಂದು ಸಣ್ಣ ಕಥೆಯೂ ಮಹಾ

ಕಥೆಯಾಗಿ ಪುಸ್ತಕರೂಪದಲ್ಲಿ ಹೊರಬರಲಿ ಎಂಬ ಆಶಯದೊಂದಿಗೆ...?





ನಿಮ್ಮ ಬರಹ ಶೈಲಿಯ ಅಭಿಮಾನಿ,

ಕೆ.ನಾ.ಗೋರೆ