ಶುಕ್ರವಾರ, ಸೆಪ್ಟೆಂಬರ್ 27, 2013

ಕಾಲ ನಿಲುವುದೆ !





ಕಾಲ ನಿಲುವುದೆ !
ಕಾಲ ನಡೆವುದು ನಡೆಯುತಲಿರುವುದು
ನಾವು ನಿಂತರೆ ಕಾಲ ನಿಲುವುದೆ
ಮಿಂಚಿ ಹೋಗುವ ಒಂದು ಗಳಿಗೆಯು
ಬದುಕಿನ ಒಂದು ಪುಟವು ಚಿರವಾಗಿ ಮಡಚಿದಂತೆ,
ಕಾಲದಲ್ಲಿ ನೀನನಾಗುವ ತನಕ ವ್ಯರ್ಥ ಮಾಡದಿರು ಬಂದ ಗಳಿಗೆಯ
ಏನಾದರೊಂದನು ಮಾಡು, ಆದರೆ ಸದಾ ಎಲ್ಲರಿಗೂ ಒಳಿತನ್ನೇ ಮಾಡು 

ಬುಧವಾರ, ಸೆಪ್ಟೆಂಬರ್ 11, 2013

ಗಣೇಶ ಚತುರ್ಥಿಯ ಸಂಭ್ರಮ : ಕೆಮರಾ ಕಣ್ಣಲ್ಲಿ ನನ್ನ ಕೈಚಳಕ


 ವಿದ್ಯುತ್ ಬೆಳಕಿನಲ್ಲಿ ಪಿಂಗಾರದ ಶೃಂಗಾರ
 ಒಂದೇ ದೀಪ ನೂರಾರು ಅರ್ಥಗಳು


ಮಳೆಗಾಲದ ವೈಯ್ಯಾರದ ಚೆಲುವೆ

E°è ¢Ã¥ÀªÀ£ÀÄß §zÀÄQUÉ ºÉÆÃ°¸ÀĪÀÅzÁzÀgÉ vÉgɪÀÄgÉAiÀÄ°è «WÀß«£Á±ÀPÀ£ÀÄ vÀ£Àß vÁ¼ÀPÉÌ vÀPÀÌAvÉ PÀÄt¸ÀĪÀ ¸ÀÆvÀæzsÁgÀ£ÀAvÉ UÉÆÃZÀj¸ÀÄvÁÛ£É.

ಶುಕ್ರವಾರ, ಸೆಪ್ಟೆಂಬರ್ 6, 2013

ಕ್ಷೀರ ಸಾಗರದೆಡೆಗೆ ಪ್ರಯಾಣ


ನಾನೂ ಸೇರಿದಂತೆ ಕೆಂಪ, ಪ್ರಭಂಜು, ಕೃಷ್ಣ, ಶಿವಾನಂದ ಕ್ಷೀರ ಸಾಗರಕ್ಕೆ ಸಾಗಿದ ಪ್ರವಾಸಿ 
ಕಿರು ಬರಹ

'ಅದೊಂದು ಅತಿ ಸುಂದರ, ಅವಿಸ್ಮರಣೀಯ ಹಾಗೂ ವಿಚಿತ್ರಾನುಭವಗಳನ್ನು ನೀಡಿದ ಅಚ್ಚಳಿಯದ ಸವಿಯಾದ ಅನುಭವ'.



ನನ್ನ ಮಟ್ಟಿಗೆ ತಿರುಗಾಟವೆಂದರೆ ದೇಹ ಒಪ್ಪದಿದ್ದರೂ ಮನಸ್ಸು ಕೇಳದ ಪ್ರವೃತ್ತಿ! ಅದೊಂದೇ ಮನಸ್ಸಿನ ಎಲ್ಲಾ ನೋವುಗಳನ್ನು ಸೀಮಿತಾವಧಿಯವರೆಗೆ ಮರೆಮಾಚುವ ದಿವ್ಯಾಔಷಧ ಎಂಬುದು ನನ್ನ ಧೃಡವಾದ ನಂಬಿಕೆ.ನಾವು ಈವರೆಗೆ ಕೈಗೊಂಡ ಟ್ರಿಪ್ಗಳೆಲ್ಲಾ ಒಂದು ಲೆವೆಲ್ಲಿಗೆ ಸಣ್ಣವುಗಳೆಂದೇ ಹೇಳಬಹುದು. ಆದರೂ ಪ್ರತೀ ಬಾರಿಯೂ ನಾವು ಸರಿಯಾಗಿ ಯೋಚಿಸಿಯೇ ಮುನ್ನಡೆಯುತ್ತಿದ್ದೆವು ಹಾಗೂ ರಜೆಯ ಅಭಾವದಿಂದ ಹತ್ತಿರದ ಪ್ರದೇಶಗಳನ್ನೇ ಆರಿಸುತ್ತಿದ್ದೆವು. ಆದರೆ ಈ ಬಾರಿ ನಮ್ಮ ದೃಷ್ಟಿ ಒಂದಷ್ಟು ದೂರಕ್ಕೆ ನೆಟ್ಟಿತ್ತು. ಅದೂ ಸ್ವರ್ಗದಿಂದಲೇ ಗೋಮಾತೆ ನಮಗಾಗಿ ಶುಭ್ರ ಹಾಲಿನ ಹೊಳೆಯನ್ನೇ ಅವಿರತವಾಗಿ ಹರಿಸುತ್ತಿದ್ದಾಳೋ ಎಂಬ ಬಾವನೆಯನ್ನು ಅಭಿವ್ಯಕ್ತಪಡಿಸಬಲ್ಲ ನೆರೆಯ ಗೋವಾ ರಾಜ್ಯದಲ್ಲಿರವ ದೂದ್ ಸಾಗತ್ ನತ್ತ ! ಇತ್ತೀಚಿಗಂತೂ ಚೆನೈ ಎಕ್ಸ್ಪ್ರೆಸ್ ಚಿತ್ರದಲ್ಲಿ ಇದರ ದೃಶ್ಯ ಕಂಡ ಮೇಲಂತೂ ಎಲ್ಲರಿಗೂ ಇದು ಪರಿಚಿತ. ಆದರೆ ಜನರು ದೂದ್ ಸಾಗತ್ ಚೆನೈಯಲ್ಲಿದೆ ಎಂದೇ ತಪ್ಪಾಗಿ ತಿಳಿದುಕೊಂಡಿದ್ದಾರೆ. ಸಿನೆಮಾದಲ್ಲಿ ದೂದ್ಸಾಗರ್ನ ರಮಣೀಯತೆಯನ್ನು ಚೆನ್ನಾಗಿಯೇ ಸೆರೆ ಹಿಡಿದಿದ್ದಾರೆ ಆದರೆ ಅದು ತಂತಹ ತಪ್ಪು ತಿಳುವಳಿಕೆಗೆ ಕಾರಣವಾದ್ದು ಮಾತ್ರ ವಿಪಯರ್ಾಸ. ವಾಸ್ತವತೆ ಏನೇಂದರೆ ದೂದ್ಸಾಗರ್ ಇರುವುದು ಗೋವಾ ರಾಜ್ಯದಲ್ಲಿ !ನಾವು ಕೇಲವ 1 ವರೆ ದಿನಗಳ ಈ ಪ್ರಯಾಣಕ್ಕೆ ಪ್ರಾಥಮಿಕ ಪೂರ್ವಸಿದ್ಧತೆಗಳನ್ನು ಮಾಡಿದ್ದರೂ ಅಲ್ಲಿಗೆ ತಲುಪುವ ಹಾಗೂ ಸರಿಯಾದ ಕಾಲಮಿತಿಯಲ್ಲಿ ಮರಳುವ ಕುರಿತು ಎಲ್ಲಿಯೂ ಸ್ಪಷ್ಟ ಮಾಹಿತಿಯೇ ದೊರಕಲಿಲ್ಲ. ಆದ್ದರಿಂದ ನಮ್ಮ ಈ ಪ್ರಯಾಣವನ್ನು ಮೊಂಡು ಧೈರ್ಯದ ದಿಟ್ಟ ನಿಧರ್ಾರ ಎಂದೇ ಹೇಳಬಹುದು. ಹೀಗೆ ಸಪ್ಟೆಂಬರ್ 31ನೇ ಶನಿವಾರದಂದು ನಮ್ಮ ಪ್ರಯಾಣ ನಿಗದಿಯಾಗಿತ್ತು. ಅಂತೆಯೇ ಮಂಗಳೂರಿನಿಂದ ಮಡ್ಗಾವ್ಗೆ ಸಾಗುವ ರಾತ್ರಿ 11.30 ರ ರೈಲಿನಲ್ಲಿ ನಮ್ಮ ಪ್ರಯಾಣ ಪ್ರಾರಂಭಗೊಂಡಿತು. ಅದೇನೋ ಸರಿಯಾದ ಪ್ಲಾನಿಂಗ್ ಮಾಡಿಲ್ಲದ ಕಾರಣ ಎಲ್ಲರ ಮಸಸ್ಸಿನಲ್ಲೂ ಟೆನ್ಶನ್ ಟಿಂಟೆಡ್ ಗ್ಲಾಸಿನ ಹಿಂದಿನ ದೃಶ್ಯದಂತೆ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು. ನಮ್ಮದು ಜನರಲ್ ಬೋಗಿ ಆದ್ದರಿಂದ ಎಲ್ಲರಿಗೂ ಕಷ್ಟದಲ್ಲಿ ಸೀಟ್ ಸಿಕ್ಕಿತು. ಎಲ್ಲರೂ ಪಾಲಿಗೆ ಬಂದದ್ದು ಪಂಚಾಮೃತ ಎಂಬಂತೆ ನಿದ್ರೆಗೆ ಜಾರುವ ಪ್ರಯತ್ನಪಟ್ಟೆವು. ಕೆಂಪ, ಪ್ರಭಂಜು, ಶಿವಾನಂದ ಬೆಳಗ್ಗಿನವರೆಗೆ ನಿದರ್ೆಗೆ ಜಾರುವ ಪ್ರಯತ್ನದಲ್ಲೇ ಕಾಲ ಕಳೆದರು.ನಮ್ಮ ಮುಂದಿನ ಪ್ರಯಾಣದ ಕುರಿತು ಸಚಿತ್ರವಾಗಿ ಸಣ್ಣದಾಗಿ ವಿವರಿಸುತ್ತೇನೆ. ನೀವು ಎಲ್ಲವನ್ನು ನೋಡಿ ಓದುವಷ್ಟು ತಾಳ್ಮೆವಹಿಸಬೇಕಷ್ಟೆ. !.ದೂದ್ ಸಾಗರ್ಹೋಗುವ ಮನಸ್ಸಿದ್ದವರಿಗೆ ಖಚಿಡಿತವಾಗಿ ಇದೊಂದು ಉತ್ತಮ ಮಾರ್ಗಸೂಚಿಯಾಗಬಲ್ಲದು.ಇಲ್ಲಿ ಪಾಸಿಟಿವ್ ಹಾಗೂ ನೆಗೆಟಿವ್ ಎರಡೂ ವಿಚಾರಗಳನ್ನು ತಿಳಿಸುವ ಪ್ರಯತ್ನ ಮಾಡುತ್ತೇನೆ. ಏಕೆಂದರೆ ನಿಮಗೆ ಅರಿವಿರುವಂತೆ ಪ್ರಯಾಣ ಸಣ್ಣದಿರಲಿ, ದೊಡ್ಡದಿರಲಿ ಇವೆರಡನ್ನೂ ಸರಿಯಾಗಿ ತಿಳಿದುಕೊಂಡು ಸಂಪೂರ್ಣ ಪೂರ್ವಸಿದ್ಧತೆಗಳೊಂದಿಗೆ ಸಾಗಬೇಕಾದ್ದು ಅತೀ ಮುಖ್ಯ. 


  ಮಡ್ಗಾವ್ ಸ್ಟೇಷನ್ : ದೂದ್ ಸಾಗರ್ ನೋಡುವ ತವಕದಲ್ಲಿ ರಾತ್ರಿ ಸರಿಯಾಗಿ ನಿದ್ರೆ ಇಲ್ಲದಿದ್ದರೂ ಉತ್ಸುಕತೆಯಿಂದ ಕಂಗೊಳಿಸುತ್ತಿರುವ ಮುಖಾರವಿಂದಗಳು


 ಮಡ್ಗಾವ್ನಿಂದ ಕೋಲಮ್ ಸಾಗುವ ಟ್ರೈನ್ನಲ್ಲಿ ಸುಖಾಸೀನರಾದ ನಮ್ಮ ಹುಡುಗರು.

 ಜೀವನವೇ ಬ್ಯಾಲೆನ್ಸ್ನಲ್ಲಿ ನಡೆದಾಡುವ ಸ್ಪಧರ್ೆ




 ಎಷ್ಟು ಬೇಡಿಕೊಂಡರೂ ನಮ್ಮನ್ನು ಬಿಟ್ಟು ಹೋಗಿ ನಮ್ಮನ್ನು ಟ್ರ್ಯಾಕ್ ಮೇಲೆ ನಡೆದುಕೊಂಡು ಹೋಗುವಂತೆ ಮಾಡಿ ಎಲ್ಲರ ಶಾಪಕ್ಕೆ ಗುರಿಯಾದ ಟ್ರೈನ್ (ಚಾಲಕ)

 ರೈಲ್ವೆ ಟ್ರ್ಯಾಕ್ ಮೇಲಿನ ನಡಿಗೆ..ಉಹೂಂ ! ಹೋದವನಿಗಷ್ಟೇ ಗೊತ್ತು ಅದರ ಕಷ್ಟ

 ಅಯ್ಯೋ ಸಾಕಪ್ಪಾ ಸಾಕು !



ದಾರಿಯಲ್ಲಿ ಸಿಗುವ ಮೊದಲ ಟನಲ್. ಒಳಗೆ ತಂಪಾದ ವಾತಾವರಣ ಬಿಸಿಲಿಗೆ ಬೆಂದು ಬಂದವರಿಗೆ ಒಂದಷ್ಟು ಉಲ್ಲಾಸ ನೀಡುತ್ತದೆ.



 ದೂರದಿಂದ ಗೋಚರಿಸುವ ದೂದ್ ಸಾಗರ್




 ಮೃತ್ಯುಕೂಪ : ಸುಮಾರು 60 ಅಡಿ ಆಳದ ಗುಂಡಿ. ನೋಡಲು ಸಣ್ಣದಾಗಿ ಕಂಡರೂ ಅದರ ತಾಕತ್ತಿನ ಮುಂದೆ ಎಲ್ಲರೂ ಸಣ್ಣವರೇ !
 ದೂದ್ ಸಾಗರ್ ಸ್ಟೇಷನ್ಗೆ ಸಾಗುವಾಗ ಸಿಗುವ ಅತ್ಯಂತ ಸುಂದರ ಹಳೇಯ ಕಟ್ಟಡದ ಅವಶೇಷ. ಅದೇನೋ ಗತಕಾಲದ ಪ್ರತೀಕದಂತೆ ಅದೆಷ್ಟೋ ವರ್ಷಗಳಿಂದ ಮೂಕ ಸಾಡ್ಷಯಾಗಿ ಎಲ್ಲವನ್ನೂ ನೋಡುವಂತಿದೆ.




ಕೋಲಮ್ನಿಂದ ದೂದ್ ಸಾಗರ್ಗೆ ಬೈಕ್ ಮೇಲೆ ಸಾಗಿಸುವ ವ್ಯವಸ್ಥೆ ಇದೆ. ಆದರೆ ಅಪ್ ಆಂಡ್ ಡೌನ್ ಒಟ್ಟು 800 ರೂವರೆಗೆ ಖಚರ್ು ಮಾಡಬೇಕಾಗುತ್ತದೆ.ಟ್ರ್ಯಾಕ್ ಮೇಲೆ ನಡೆಯುವ ಮಜಾ ಮಾತ್ರ ಸಿಗುವುದಿಲ್ಲ.



 ನಿಮ್ಮ ದಾರಿ ನಿಮಗೆ ನನ್ನ ದಾರಿ ನನಗೆ ಎಂದು ಹೇಳುತ್ತಿರಬಹುದೇ ಈ ನಾಯಿ !
 ದೂದ್ ಸಾಗರ್ ಪರಿಪೂರ್ಣ ದೃಶ್ಯ

ಸರಿಸುಮಾರು 12 ರಿಂದ 13 ಕಿ.ಮೀ ಸುಡುಬಿಸಿಲಿಗೆ ನಡೆದು ಬಂದಾಗ ಸಂಪೂರ್ಣ ಬಸವಳಿದು ಹೊಗಿದ್ದೆವು. ಅಂತಹ ಸನ್ನಿವೇಶದಲ್ಲಿ ಈ ಫಾಲ್ಸ್ ಸಿಕ್ಕಿದ್ದು ಸ್ವರ್ಗ ಸಿಕ್ಕ ಹಾಗಾಯಿತು. ಅಲ್ಲಿನ ನೀರಿನ ಗುಣವೋ ಏನೋ ಆವರೆಗೆ ನಡೆದುಬಂದಾಗಿನ ಎಲ್ಲಾ ಆಯಾಸವೂ ಇತಿಹಾಸವಾಗಿ ಹೋಗಿತ್ತು. ಇಲ್ಲಿಂದಲೇ ಪ್ರಯಾಣ ಆರಂಬಿದ್ದೇವೋ ಎಂಬಷ್ಟು ಫ್ರೆಶ್ ಆಗಿತ್ತು.





 ದೂದ್ ಸಾಗರ ಸ್ಟೇಷನ್



ಇಲ್ಲಿ ಸ್ಟೇಷನ್ ಮಾಸ್ಟರ್ ಹಾಗೂ 4 ರಿಂದ 5 ಜನ ರೈಲ್ವೇ ಇಲಾಖೆಯವರನ್ನು ಬಿಟ್ಟರೆಮನುಷ್ಯವಾಸವೇ ಇಲ್ಲದ ನಿರ್ಜನ ಭಯಾನಕ ಪ್ರದೇಶ