ಸೋಮವಾರ, ಮೇ 9, 2011

ರಸ್ತೆಗಳಲ್ಲಿ ಮೂಕ ಪ್ರಾಣಿಗಳ ನಿರಂತರ ಸಾವು


ನಾನು ಸಂಜೆ  ನನ್ನ  ಬೈಕ್   ನಲ್ಲಿ  ರಸ್ತೆಯಲ್ಲಿ  ಸಂಚರಿಸುತ್ತಿರುವಾಗ ....ಒಂದು  ಪುಟ್ಟ  ಅಳಿಲು  ಮರಿ  ಮಾರ್ಗ  ಮಧ್ಯೆ   ನರಳುತ್ತಿರುವುದ ಕಂಡೆ. ಕೂಡಲೇ ಬೈಕ್ ನಿಲ್ಲಿಸಿ ಅದರ ಬಳಿ ಹೋಗಿ ಅದನ್ನು ಡಾಕ್ಟರ್ ಬಳಿ ಒಯ್ಯ ಬೇಕೆಂದಿದ್ದೆ . ನಾನು ಅದನ್ನು ಕೈಯಲ್ಲಿ ಎತ್ತಿಕೊದ ಕ್ಷಣದಲ್ಲೇ ಅದು ನನ್ನ ಕೈಯಲ್ಲೇ  ಪ್ರಾಣ ಬಿಟ್ಟಿತು...ಪಾಪ ಸಂಜೆ ಮನೆ ಸೇರುವ ತವಕದಲ್ಲಿದ್ದ ಆ ಪುಟ್ಟ ಜೀವ ತನ್ನ ಜೀವನದ ಯಾತ್ರೆಯನ್ನೇ ಮುಗಿಸಬೇಕಾಯಿತು...ಅದರ ಬರುವಿಕೆಗಾಗಿ ಅದರ ಬಂಧು ಬಳಗದವರು ಎಷ್ಟು ಕಾತರದಿಂದ ಕಾಯುತ್ತಿದ್ದರೋ...!!!! ನಾವು ಸ್ವಾರ್ಥಿಗಳು ಆ ಸಾಧು ಜೀವಿಗಳ ಜೀವಕ್ಕೆ ಬೆಲೆ ಕೊಡುವಸ್ತು  ಸೌಜನ್ಯತೆ ನಮಗೆಲ್ಲಿದೇ ಹೇಳಿ..ನನಗೊಂದು ಕ್ಷಣ ಅಳು ಬಂತು...ಬಳಿಕ ಅದನ್ನು ಮಣ್ಣಿನಲ್ಲಿ ಹುತು ನನ್ನ ಕರ್ತವ್ಯ ಮಾಡಿದ್ದೇನೆ ಎಂಬ ಸಮಾಧಾನ ಒಂದು ಬಿಟ್ಟರೆ...ಇನ್ನು  ಮನಸ್ಸಿನಲ್ಲಿ ಉಳಿದದ್ದು ದುಃಖ ಮಾತ್ರ..... ದಯವಿಟ್ಟು ಇನ್ನು ಮುಂದಾದರು ಆ ಸಾಧು ಪ್ರಾಣಿಗಳ ಬಲಿ ತೆಗೆದುಕೊಳ್ಳಬೇಡಿ..ನಾವು ಜಿವಿಸೋಣ ಅವುಗಳನ್ನೂ ಜೀವಿಸಲು ಬಿಡೋಣ.


ಇಂತಿ ಪ್ರಾಣಿ ಪ್ರೀಯ...ಕೆ.ನಾ .ಗೋರೆ  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ