ಮೊದಮೊದಲು ಹೆಚ್ಚಾಗಿ ಪ್ರಿತಿಸುತ್ತಿದ್ದವಳು ಅವಳು!
ಎನ್ನ ಬಿಟ್ಟು ಹೋಗದಿರು ನಲ್ಮೆಯ ಹುಡುಗನೇ,
ನೀ ಬೇಕು ಎನಗೆ, ಎನ್ನ ಬಾಳಿಗೆ ಎನ್ನುತ್ತಿದ್ದಳು ಅವಳು
ಪ್ರೀತಿಯ ಮಾತುಗಳಿಂದ ಪ್ರೀತಿ ಸಾಗರದಿ ತೇಲುವಂತೆ ಮಾಡಿದವಳು ಅವಳೇ !?
ಬದುಕಬೇಕು ಎಂಬ ಪದಕೆ ಅರ್ಥ ನೀಡಿದವಳು ಅವಳೇನೆ...
ಅವಳ ಪ್ರೋತ್ಸಾಹದಿ ಬದುಕು ಸರಿದಾರಿಗೆ ಬರುತಿರಲು...
ಮೆಲ್ಲ ಮೆಲ್ಲನೆ ದುರಾಗ ಬಯಸುತಿಹಳಲ್ಲ! ಏಕೋ ! ಏನೋ !
ಪ್ರೀತಿಯ ಮಾತುಗಳಿಗೆ ಬರಗಾಲ ಬಂದಿಹುದು !
ಎನ್ನ ಪ್ರೀತಿಯ ಮಾತುಗಳೆಲ್ಲವೂ ಅವಳಿಗೆ ಇರಿಟೇಟಾಗುತಿಹುದು!
ಅವಳ ಪ್ರೀತಿ ಸಿಗದೇ ಬಾಳೆ ಮಂಕಾಗಿಹುದೆನ್ನ...
ಇಂತಹ ಬರಗಾಲದಲೂ ಸಿಟ್ಟು ಬೇಸರಗಳೆಲ್ಲ ಸಾಗರವಾಗಿ ಧುಮ್ಮಿಕ್ಕುತಿಹವಲ್ಲಾ!ಆದರೂ ಹತ್ತಿಕ್ಕುವೇನು ಆ ಪ್ರವಾಹವನ್ನು ಅವಳ ಪ್ರೀತಿಯ ಬಲದಿಂದ
ಇಂತಹ ಬರಗಾಲದಲೂ ಸಿಟ್ಟು ಬೇಸರಗಳೆಲ್ಲ ಸಾಗರವಾಗಿ ಧುಮ್ಮಿಕ್ಕುತಿಹವಲ್ಲಾ!ಆದರೂ ಹತ್ತಿಕ್ಕುವೇನು ಆ ಪ್ರವಾಹವನ್ನು ಅವಳ ಪ್ರೀತಿಯ ಬಲದಿಂದ
ಅವಳ ತಿರಸ್ಕಾರವನು ಪುರಸ್ಕಾರವೆಂದು ತಿಳಿದು ಸಹಿಸುವೇನು ಎಲ್ಲವನು ಅವಳಿಗಾಗಿ !
ಅವಳ ತಿರಸ್ಕಾರದಿ ನೊಂದು ದೂರಾಗಲಾರೆನು ಎಂದೆಂದೂ...
ನನಗೆ ಗೊತ್ತು ನಾ ಬೇಕು ಅವಳಿಗೆ, ಅವಳ ಬಾಳಿಗೆ ರಕ್ಷೆಯ ಕವಚವಾಗಿ!
ಈ ಸತ್ಯವು ಅವಳಿಗರಿವಾಗಬಹು ಎಂದಾದರೊಂದು ದಿನ ಅವಳಿಗೆ...
ಇದೆನ್ನ ಬಾಳ ಕೊನೆ ಭರವಸೆಯು !
ಕೆ. ನಾ. ಗೋರೆ
nice...........
ಪ್ರತ್ಯುತ್ತರಅಳಿಸಿchennaagide....
ಪ್ರತ್ಯುತ್ತರಅಳಿಸಿmunduvarisi...